ಮಾರಿಕಾಂಬೆ ದೇಗುಲದಿಂದ ಭವನ, ಶಾಲೆ ನಿರ್ಮಾಣ

6sgr4
ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ವ್ಯವಸ್ಥಾಪಕ ಸಮಿತಿಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು, ಉಪವಿಭಾಗಾಧಿಕಾರಿ ಆರ್.ಯತೀಶ್ ಅವರನ್ನು ಸನ್ಮಾನಿಸಲಾಯಿತು. ಕೆ.ಎನ್.ನಾಗೇಂದ್ರ, ಗಿರಿಧರ ರಾವ್, ನಾಗೇಂದ್ರ ಕುಮುಟಾ ಇತರರಿದ್ದರು.
Published on

ಸಾಗರ: ಮಾರಿಕಾಂಬಾ ದೇವಸ್ಥಾನಕ್ಕೆ ಬರುವ ಆದಾಯ ಸದ್ಬಳಕೆಯಾಗಬೇಕು. ಹಾಗಾಗಿ ದೇವಸ್ಥಾನದಿಂದ ಸುಸಜ್ಜಿತ ಕಲ್ಯಾಣ ಮಂಟಪ, ಶಾಲೆ ನಿರ್ಮಾಣದ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಶಿರಸಿ ಮಾರಿಕಾಂಬಾ ದೇವಸ್ಥಾನ ಉತ್ತಮವಾಗಿ ಅಭಿವೃದ್ಧಿಯಾಗುತ್ತಿದೆ. ಅದೇ ರೀತಿ ನಮ್ಮ ಊರಿನಲ್ಲೂ ಆಗಬೇಕು. ದೇವಸ್ಥಾನದ ಹೆಸರಿನಲ್ಲಿ 8.5 ಎಕರೆ ಜಾಗವಿದ್ದು, ಸುಸಜ್ಜಿತ ಕಲ್ಯಾಣ ಮಂಟಪ, 1-10ನೇ ತರಗತಿವರೆಗೆ ವಿದ್ಯಾಭ್ಯಾಸ ನೀಡಲು 2-3 ಅಂತಸ್ತಿನ ಶಾಲೆ ನಿರ್ಮಾಣವಾಗಬೇಕು. ಅಲ್ಲಿಯೇ ಜಾತ್ರೆ ನಡೆಸಲು ಬೇಕಾದ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಸಮಿತಿಯಲ್ಲಿ ಸಣ್ಣಪುಟ್ಟ ಗೊಂದಲ ಇರುವುದು ನನ್ನ ಗಮನಕ್ಕೆ ಬಂದಿದೆ. ಪದಾಧಿಕಾರಿಗಳು ಸರಿಪಡಿಸಿಕೊಂಡು ಹೋಗಬೇಕು. ದೇವಸ್ಥಾನದ ಮೂಲಕ ಜನಪರ ಕೆಲಸ ಮಾಡುತ್ತೇವೆ. ಸಮಿತಿಯ ಎಲ್ಲರ ಸಲಹೆ ಪಡೆದು ಅಭಿವೃದ್ಧಿ ಮಾಡಲಾಗುವುದು ಎಂದರು.

ಉಪವಿಭಾಗಾಧಿಕಾರಿ ಆರ್.ಯತೀಶ್, ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಪ್ರಮುಖರಾದ ಗಂಗಾಧರ ಜಂಬಿಗೆ, ಸುಂದರ ಸಿಂಗ್, ತಾರಾಮೂರ್ತಿ, ಲೋಕೇಶ ಕುಮಾರ್, ಆರ್.ಚಂದ್ರು, ಪುರುಷೋತ್ತಮ, ಸಂತೋಷ್ ಶೇಟ್, ಜಯರಾಮ್, ನವೀನ್, ನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net