ಮನೆಯಲ್ಲೇ ಈಜುಕೊಳ ನಿರ್ಮಾಣ

Swimming Pool
Published on

ದೈಹಿಕ ಕ್ಷಮತೆಯನ್ನು ಬಯಸುವವರು, ವೃತ್ತಿಪರ ಕ್ರೀಡಾಪಟುಗಳು ಜಾಗಿಂಗ್, ಸ್ವಿಮ್ಮಿಂಗ್ ಮಾಡುವುದು, ಜಿಮ್ೆ ಹೋಗುವುದೆಲ್ಲ ಸಾಮಾನ್ಯ. ಆದರೆ ಕೋವಿಡ್-19 ಸೋಂಕಿನಿಂದಾಗಿ ಎಲ್ಲವೂ ಮುಚ್ಚಲ್ಪಟ್ಟಿದ್ದು, ಎಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ.

ಅರ್ಜೆಂಟೀನಾದ ಪ್ಯಾರಾಲಂಪಿಕ್ ಈಜುಗಾರ ಸೆಬಾಸ್ಟಿಯನ್ ಕೂಡ ಇದೇ ಸಮಸ್ಯೆ ಎದುರಿಸಿದರು. ಕಳೆದ 4-5 ತಿಂಗಳಿಂದ ಈಜುವುದಕ್ಕೇ ಸಾಧ್ಯವಾಗಿಲ್ಲ. ಇದನ್ನು ಕಂಡ ಅವರ ತಂದೆ ಎಡ್ಮಂಡ್ ಮನೆಯ ಹಿಂಭಾಗದಲ್ಲೇ ಈಜುಕೊಳವನ್ನು ನಿರ್ವಿುಸಿಕೊಟ್ಟಿದ್ದಾರೆ.

ಎಡ್ಮಂಡ್ ಸ್ವತಃ ಇಟ್ಟಿಗೆ ಕೆಲಸ ಮಾಡುವವರು. ಮೊದಲ ದಿನ ಮನೆಯ ಹಿಂದೆ ನೀರು ಹರಿದು ಹೋಗದಂತೆ ತಡೆಯಲು ಎರಡೂ ಬದಿಗೆ ಮರದ ದಿಮ್ಮಿಗಳನ್ನು ಇಟ್ಟು, ಅವುಗಳ ಮೇಲೆ ಪ್ಲಾಸ್ಟಿಕ್ ಶೀಟ್ ಮುಚ್ಚಲಾಯಿತು. ಚೀಲದ ಮಾದರಿಯಲ್ಲಿ ರೂಪುಗೊಂಡಿರುವ ಇದರಲ್ಲಿ ನೀರು ನಿಂತು ಈಜುಕೊಳದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net