

ನವದೆಹಲಿ: ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಚೀನಾದ ಚಟುವಟಿಕೆಗಳು ಮುಂದುವರಿದಿವೆ. ದಕ್ಷಿಣ ದಂಡೆಯ ಸಮೀಪ ಹೊಸ ಪೋಸ್ಟ್‌ಗಳನ್ನು ಸೃಷ್ಟಿಸುತ್ತಿರುವುದೂ ಉಪಗ್ರಹ ಚಿತ್ರಗಳ ಮೂಲಕ ಸಾಬೀತಾಗಿದೆ. ಇಷ್ಟಾಗಿಯೂ ಆಗಸ್ಟ್ ಕೊನೆಯಲ್ಲಿ ನಡೆದ ವಿದ್ಯಮಾನಗಳಿಗೆ ಭಾರತವೇ ಹೊಣೆ ಎಂದು ಗೂಬೆ ಕೂರಿಸಲು ಚೀನಾ ಮುಂದಾಗಿದೆ.
ಪೂರ್ವ ಲಡಾಖ್ ವಲಯದಲ್ಲಿ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿಯನ್ನು ದಲಾಯಿಸಲು ಚೀನಾ ಸೇನೆ ಆಗಸ್ಟ್ 29 ಮತ್ತು 30ರಂದು ಪ್ರಚೋದನಕಾರಿ ಚಟುವಟಿಕೆ ನಡೆಸಿತ್ತು. ಆದರೆ, ಎಲ್‌ಎಸಿಯಲ್ಲಿ ಭಾರತ ‘ನಿಸ್ಸಂಶಯವಾಗಿಯೂ ಕಾನೂನುಬಾಹಿರವಾಗಿ ಅತಿಕ್ರಮಣ ನಡೆಸಿತ್ತು’ ಎಂದು ಚೀನಾ ಸೋಮವಾರ ಆರೋಪಿಸಿದೆ. ಇದನ್ನೂ ಓದಿ: ಗಂಡ-ಮಗನನ್ನು ಬದುಕಿಸಲು ಪ್ರಾಣತೆಗೆದ ಹಾವನ್ನು ತಂದು ಪೂಜಿಸಿದಳು: ಮುಂದೇನಾಯ್ತು ನೋಡಿ…
ಮಾಸ್ಕೋದಲ್ಲಿ ಕಳೆದ ವಾರ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರ ಸಭೆ ನಡೆದ ನಂತರದಲ್ಲಿ ಚೀನಾ ಈ ಹೇಳಿಕೆ ನೀಡಿದೆ. ಉಭಯ ದೇಶಗಳ ನಡುವೆ ಬೇಕಿರುವುದು ‘ಪರಸ್ಪರ ನಂಬಿಕೆಯೇ ಹೊರತು ಅನುಮಾನವಲ್ಲ’ ಎಂದು ಸಭೆಯ ನಂತರ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದರು.
ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ದಂಡೆಯಲ್ಲಿ ಚೀನಿ ತುಕಡಿಗಳು ನಡೆಸಲಿದ್ದ ಚಟುವಟಿಕೆಗಳನ್ನು ಭಾರತೀಯ ಪಡೆಗಳು ತಡೆದಿವೆ ಎಂದು ಭಾರತದ ಸಚಿವಾಲಯಗಳು ಹೇಳಿದ್ದವು. ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ದಲಾಯಿಸುವ ಪ್ರಯತ್ನವಿದೆಂುದು ಸ್ಪಷ್ಟ ಎಂದು ಭಾರತದ ಸಚಿವಾಲಯಗಳು ಹೇಳಿದ್ದವು ಎನ್ನುವುದನ್ನೂ ಚೀನಾದ ದೂತಾವಾಸದ ವೆಬ್‌ಸೈಟ್‌ನಲ್ಲಿ ರಾಯಭಾರಿ ಸನ್ ವೀಡಾಂಗ್ ತಿಳಿಸಿದ್ದಾರೆ.