ಗಂಡ-ಮಗನನ್ನು ಬದುಕಿಸಲು ಪ್ರಾಣತೆಗೆದ ಹಾವನ್ನು ತಂದು ಪೂಜಿಸಿದಳು: ಮುಂದೇನಾಯ್ತು ನೋಡಿ...

snakes
Published on

ದರಯಾಪುರ (ಬಿಹಾರ): ವಿಷಕಾರಿ ಹಾವೊಂದು ಇಲ್ಲಿಯ ತಂದೆ ಮಗನನ್ನು ಕಚ್ಚಿ ಸಾಯಿಸಿದಾಗ ಮಾಂತ್ರಿಕನ ಮಾತು ಕೇಳಿ ಆ ಹಾವನ್ನು ತಂದು ಪೂಜಿಸಿದಳು ಈ ಮಹಿಳೆ. ನಂತರ ಆದದ್ದೇ ಭಯಾನಕ.

ಬಿಹಾರದ ದರಯಾಪುರ್​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿಯ ನಿವಾಸಿಗಳಾದ ತಂದೆ ಮಗ ಹೋಗುತ್ತಿದ್ದ ವೇಳೆ ಅಚಾನಕ್​ ಆಗಿ ಹಾವೊಂದು ಕಚ್ಚಿಬಿಟ್ಟಿದೆ. ವಿಷ ಮೈಯೆಲ್ಲಾ ಏರಿ ತಂದೆ-ಮಗ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

ಗ್ರಾಮಸ್ಥರೆಲ್ಲರೂ ಸೇರಿ ಮೃತದೇಹಕ್ಕೆ ಅಂತ್ಯಕ್ರಿಯೆ ಸಲ್ಲಿಸಲು ಶವವನ್ನು ಚಿತೆಯ ಮೇಲಿಟ್ಟಿದ್ದಾರೆ.

ಈ ಮಾತು ಗ್ರಾಮದಲ್ಲಿದ್ದ ತಾಂತ್ರಿಕನ ಕಿವಿಗೆ ತಲುಪಿದೆ. ಅವನು ಅಯ್ಯೋ, ದೇಹವನ್ನು ಏತಕ್ಕೆ ಹೂತಿರಿ. ಕಚ್ಚಿದ ಹಾವನ್ನೇ ಕರೆದುಕೊಂಡು ಬಂದರೆ, ಅದು ಸತ್ತವರನ್ನು ಬದುಕಿಸಬಲ್ಲುದು. ವಿಷವನ್ನು ಅದು ವಾಪಸ್​ ಹೀರಬಲ್ಲುದು ಎಂದಿದ್ದಾನೆ. ಇದನ್ನೇ ಗ್ರಾಮಸ್ಥರು ನಂಬಿದ್ದಾರೆ. ಚಿತೆಯ ಮೇಲಿದ್ದ ಶವವನ್ನು ಕೆಳಕ್ಕೆ ಇಳಿಸಿದ್ದಾರೆ. ಈ ವೇಳೆಗಾಗಲೇ ಗ್ರಾಮಸ್ಥರ ಸಹಾಯದಿಂದ ಮಹಿಳೆ ಹಾವನ್ನು ಹುಡುಕಿ ತಂದಿದ್ದಾಳೆ.

ತಕ್ಷಣ ಶವವನ್ನು ತಾಂತ್ರಿಕನ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಹಾವನ್ನು ಅಲ್ಲಿಯೇ ಇಟ್ಟ ತಾಂತ್ರಿಕ, ಅದಕ್ಕೆ ಅರಿಶಿಣ-ಕುಂಕುಮವನ್ನು ಇಟ್ಟು ಪೂಜಿಸುವಂತೆ ಹೇಳಿದ್ದಾನೆ. ಪತಿ ಮತ್ತು ಮಗನ ಪ್ರಾಣ ಕಾಪಾಡುವಂತೆ ಬೇಡಿಕೊಳ್ಳಲು ಹೇಳಿದ್ದಾನೆ. ಪತ್ನಿ ಅದೇ ರೀತಿ ಮಾಡಿದ್ದಾಳೆ.

ಹೀಗೆ ಮಾಡಿದ ಬಳಿಕ, ಶವದ ಸಮೀಪ ಹಾವನ್ನು ಬಿಡಲಾಗಿದೆ. ಹಾವು ಸತ್ತವರನ್ನು ಬದುಕಿಸುತ್ತದೆ ಎಂದು ಎಲ್ಲರೂ ಕಾತರದಿಂದ ಕಾದಿದ್ದಾರೆ. ಆದರೆ ಹಾವು ಮಾತ್ರ ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಸಾಕು ಎಂದು ಒದ್ದಾಡುತ್ತಿತ್ತು. ಇದರಿಂದ ಕೋಪಗೊಂಡ ಗ್ರಾಮಸ್ಥರು ಹಾವನ್ನು ಹೊಡೆದು ಕೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net