

ರಾಣೆಬೆನ್ನೂರ: ದೇಶದ ಸಂವಿಧಾನ ಎಲ್ಲ ಧರ್ಮ, ಜಾತಿ, ಜನಾಂಗದವರಿಗೆ ಸಮಾನತೆ, ಸ್ವಾತಂತ್ರ$್ಯ ನೀಡಿದ್ದು ಜನತೆ ಸಂವಿಧಾನದ ಕುರಿತು ಅರಿತುಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಧುಸೂದನರಾಮ್ ಕೆ.ವಿ. ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ ವತಿಯಿಂದ ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಸಂವಿಧಾನ ದಿನ ನಿಮಿತ್ತ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸಂವಿಧಾನ ಜಗತ್ತಿನ ಅತಿದೊಡ್ಡ ಸಂವಿಧಾನವಾಗಿದ್ದು, ಪ್ರಜಾಪ್ರಭುತ್ವದ ಅಡಿಯಲ್ಲಿ ಸರ್ವರಿಗೂ ಬದುಕುವುದಕ್ಕೆ ಅವಕಾಶ ನೀಡಿದೆ ಎಂದರು.
ತಹಸೀಲ್ದಾರ್ ಆರ್.ಎಚ್. ಭಾಗವಾನ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ದಿನ ಕುರಿತು ವಕೀಲ ಕುಮಾರ ಮಡಿವಾಳರ ಉಪನ್ಯಾಸ ನೀಡಿದರು.
ನಗರಸಭೆ ಆಯುಕ್ತ ಫಕ್ಕಿರಪ್ಪ ಇಂಗಳಗಿ, ತಾಪಂ ಇಒ ಪರಮೇಶ, ಬಿಇಒ ಶ್ಯಾಮಸುಂದರ ಅಡಿಗ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಉಪಾಧ್ಯಕ್ಷ ಲಕ್ಷ$್ಮಣ ಕೆಂಗೊಂಡ, ಕಾರ್ಯದಶಿರ್ ಎಸ್.ಎಂ. ಡೊಂಬರ ಮತ್ತಿತರರು ಉಪಸ್ಥಿತರಿದ್ದರು.