

ಧಾರವಾಡ: ವಿಶ್ವದಲ್ಲಿಯೇ ಶ್ರೇಷ್ಠವಾದ ಭಾರತ ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿಹಿಡಿದು ಅದರ ಆಶಯದಂತೆ ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ವಿಕಲಚೇತನರ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂವಿಧಾನದ ಪೀಠಿಕೆಯು ಸಂವಿಧಾನದ ತಿರುಳಾಗಿದೆ. ಪೀಠಿಕೆಯಲ್ಲಿ ಅಳವಡಿಸಿರುವ ಆಶಯಗಳನ್ನು ಭಾರತೀಯರಾದ ನಾವು ತಪ್ಪದೇ ಪಾಲಿಸಬೇಕು. ಭ್ರಾತೃತ್ವ, ಸಹಯೋದರತ್ವ ಸಾಮರಸ್ಯಗಳನ್ನು ಉಳಿಸಿ, ಬೆಳೆಸಲು ಸಂವಿಧಾನ ಮಾರ್ಗಸೂಚಿಯಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ರಚನೆಗೊಂಡು ೭೫ ವರ್ಷಗಳಾಗಿವೆ. ಜಿಲ್ಲೆಯಲ್ಲಿ ಜ. ೨೬ರಂದು ಆರಂಭಗೊAಡ ಜಾಥಾ ಕಾರ್ಯಕ್ರಮ ೧೦೬ ಗ್ರಾಮಗಳಲ್ಲಿ ಸಂಚರಿಸಿದೆ. ಗ್ರಾಮಿಣ ಜನತೆ ಇದನ್ನು ಆತ್ಮೀಯವಾಗಿ ಸ್ವಾಗತಿಸಿ ಹಬ್ಬದಂತೆ ಆಚರಿಸುತ್ತಿದ್ದಾರೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಽÃಶ ಪಿ.ಎಫ್. ದೊಡ್ಡಮನಿ ಸಂವಿಧಾನ ಪೀಠಿಕೆ ಬೋಽಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಬಕಾಷ್ ಎಂ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಿಕಲಚೇತನರ ಕಲ್ಯಾಣ ಅಽಕಾರಿ ಜಗದೀಶ ಕೆ. ವಂದಿಸಿದರು.
ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿಲಕಚೇತನರು ಕೆಸಿಡಿ ಕಾಲೇಜು ಮೈದಾನದಿಂದ ಬೈಕ್ ರ‍್ಯಾಲಿ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಮುಕ್ತಾಯಗೊಂಡಿತು.