ದೇಶದ ಸಮೃದ್ಧಿಗೆ ಸಂವಿಧಾನ, ಸಂಸ್ಕಾರ ಅಗತ್ಯ

rpt shree
ರಿಪ್ಪನ್‌ಪೇಟೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪಿಎಸ್‌ಐ ಎಸ್.ಪಿ.ಪ್ರವೀಣ, ವಕೀಲ ಎಂ.ಲೋಕೇಶ ಅವರನ್ನು ಮಳಲಿಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು. ವೀರಭದ್ರಪ್ಪ, ಅನ್ನಪೂರ್ಣಮ್ಮ, ತೇಜಮೂರ್ತಿ ಇತರರಿದ್ದರು.
Published on

ರಿಪ್ಪನಪೇಟೆ: ದೇಶ ಸರಿ ದಾರಿಯಲ್ಲಿ ನಡೆಯಬೇಕಾದರೆ ಸಂವಿಧಾನ ಅಗತ್ಯ. ಧರ್ಮ ಸರಿ ದಾರಿಯಲ್ಲಿ ನಡೆಯಬೇಕಾದರೆ ಸಂಸ್ಕಾರ ಅಗತ್ಯ ಎಂದು ಮಳಲಿಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗಣರಾಜ್ಯೋತ್ಸವದ ನಿಮಿತ್ತ ಹಲವು ವರ್ಷಗಳಿಂದ ಮಾಜಿ ಸೈನಿಕ ವೀರಭದ್ರಪ್ಪ ಅವರ ನಿವಾಸದಲ್ಲಿ ನಡೆಸಿಕೊಂಡು ಬಂದಿರುವ ಇಷ್ಟಲಿಂಗ ಮಹಾಪೂಜೆ ನಂತರ ಆಶೀರ್ವಚನ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಹಲವು ತಜ್ಞರು ಈ ದೇಶದ ಎಲ್ಲರಿಗೂ ಸರಿಯಾದ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ರಚಿಸಿದ ಸಂವಿಧಾನದಿಂದ ದೇಶ ಸರಿ ದಾರಿಯಲ್ಲಿ ಸಾಗುತ್ತಿದೆ. ಅಂತೆಯೇ ನಮ್ಮ ಧಾರ್ಮಿಕ ಪರಂಪರೆಯ ಆಚಾರ್ಯರು ನೀಡಿರುವ ಸಂಸ್ಕಾರದಿಂದ ಧರ್ಮ ಸರಿಯಾಗಿ ಸಾಗುತ್ತಿದೆ. ಸಮೃದ್ಧ ಸಮಾಜಕ್ಕೆ ಸಂವಿಧಾನ ಮತ್ತು ಸಂಸ್ಕಾರಗಳೆರಡೂ ಅಗತ್ಯ ಎಂದು ತಿಳಿಸಿದರು.

ಪಟ್ಟಣದ ಠಾಣೆ ಪಿಎಸ್‌ಐ ಎಸ್.ಪಿ.ಪ್ರವೀಣ, ಹೈಕೋರ್ಟ್ ವಕೀಲ ಎಂ.ಲೋಕೇಶ್ ಮತ್ತು ಮಾಜಿ ಸೈನಿಕ ಬೋಜರಾಜ ಅವರನ್ನು ಸನ್ಮಾನಿಸಲಾಯಿತು.

ಅನ್ನಪೂರ್ಣಮ್ಮ ವೀರಭದ್ರಪ್ಪ, ಪ್ರಮುಖರಾದ ತೇಜಮೂರ್ತಿ, ವಾಸಪ್ಪ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net