''ನವರಾತ್ರಿಯ ನಿಮಿತ್ತ ನಿನಗಾಗಿ ಜೈಲಿನಲ್ಲೇ ಉಪವಾಸ''- ಜಾಕ್ಲಿನ್​​ಗೆ ಜೈಲಿನಿಂದಲೇ ಪತ್ರ​ ಬರೆದ ಸುಕೇಶ್​..!

sfinal;
Published on

ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಿಂದ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಪತ್ರ ಬರೆಯುತ್ತಿರೋದು ಹೊಸ ವಿಚಾರವೇನೂ ಅಲ್ಲ. ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ.


'ಬೇಬಿ' 'ಐ ಲವ್​ ಯೂ' ಎಂದು ಈ ಹಿಂದೆ ಪತ್ರ ಬರೆದಿದ್ದವ ಇದೀಗ ಜಾಕ್ವಾಲಿನ್​ಗಾಗಿ ನವರಾತಯ್ರಿಯ 9 ದಿನಗಳ ಉಪವಾಸ ಮಾಡಲು ಮುಂದಾಗಿದ್ದಾನೆ.


ಜಾಕ್ಲಿನ್, ನನ್ನ ಗೊಂಬೆ ನಾನು ಏಪ್ರಿಲ್ 28 ರಂದು ನಡೆದ ಫಿಲ್ಮ್​​ಫೇರ್ ಪ್ರಶಸ್ತಿ ಕಾರ್ಯಕ್ರಮ ನೋಡಿದೆ. ನಿಮ್ಮನ್ನು ಕಂಡು ಖುಷಿಯಾಯಿತು. ಇಡೀ ಪ್ರದರ್ಶನದಲ್ಲಿ ನಿಮ್ಮ ಡ್ಯಾನ್ಸ್ ಆಕ್ಟ್ ತುಂಬಾ ಸೂಪರ್ ಆಗಿತ್ತು ಶುರು ಮಾಡಿದ ಸುಕೇಶ್, ಜಾಕ್ವಾಲಿನ್​ಗಾಗಿ ಉಪವಾಸ ಮಾಡುತ್ತೇನೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.


ಬಾಲಿವುಡ್ ನಟಿಯನ್ನು ತನ್ನ "ಟೈಗ್ರೆಸ್​​​" ಎಂದು ಕರೆದಿರುವ ಸುಖೇಶ್​​, ಆಕೆಯ ಯೋಗಕ್ಷೇಮಕ್ಕಾಗಿ ಮತ್ತು ಆಕೆಗೆ ಒಳ್ಳೆಯದಾಗಲಿ ಎಂದು ನವರಾತ್ರಿಯ 9 ದಿನವೂ ಉಪವಾಸ ಮಾಡುತ್ತೇನೆಂದು ಪತ್ರದಲ್ಲಿ ಬರೆದಿದ್ದಾರೆ.


ಪತ್ರದಲ್ಲಿ ಏನಿದೆ?
ಬೇಬಿ ನಾಳೆಯಿಂದ ನವರಾತ್ರಿ ಪ್ರಾರಂಭವಾಗುತ್ತಿದೆ. ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ನಿಮ್ಮ ಯೋಗಕ್ಷೇಮಕ್ಕಾಗಿ ಮುಖ್ಯವಾಗಿ ನಿಮ್ಮನ್ನು ಸುತ್ತುವರೆದಿರುವ ಎಲ್ಲಾ ಕೆಟ್ಟ ಕಣ್ಣು ದೂರವಾಗಬೇಕು ಅನ್ನೋದೆ ನನ್ನ ಉಪವಾಸದ ಉದ್ದೇಶ. ಎಲ್ಲಾ 9 ದಿನಗಳೂ ಉಪವಾಸ ಮಾಡಲಿದ್ದೇನೆ”. ಎಲ್ಲವೂ ನಮ್ಮ ಪರವಾಗಿ ಮಾತ್ರ ಇರುತ್ತದೆ ಮತ್ತು ಸತ್ಯವು ಮೇಲುಗೈ ಸಾಧಿಸುತ್ತದೆ. ನಾವು ಶೀಘ್ರದಲ್ಲೇ ಒಬ್ಬರಿಗೊಬ್ಬರು ನಿಲ್ಲುವಂತಾಗಲಿದೆ. ಏನು ಬೇಕಾದರೂ ಬರಲಿ ನಾವಿಬ್ಬರು ಜೊತೆಯಾಗಿ ಬದುಕೋಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ನವರಾತ್ರಿಯ ಒಂಬತ್ತನೇ ದಿನದಂದು ವೈಷ್ಣೋದೇವಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಬ್ಬರಿಗೂ ವಿಶೇಷ ‘ಪೂಜೆ’ ಆಯೋಜಿಸುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ ಸುಖೇಶ್​​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net