

ಬೆಂಗಳೂರು: ಕರೊನಾ ಛಾಯೆ ನಡುವೆಯೂ ನಾಡಿನ ಜನತೆ ಶಕ್ತಾನುಸಾರ 'ವರಮಹಾಲಕ್ಷ್ಮೀ' ಹಬ್ಬ ಆಚರಿಸುತ್ತಿದ್ದು, 'ಲಕ್ಷ್ಮೀ' ನಾಮಸ್ಮರಣೆ ಮೇಳೈಸಿದೆ. ಆದರೆ, ಯುವ ಕಾಂಗ್ರೆಸ್ನ ಕಾರ್ಯಕರ್ತರು ಸಿ.ಪಿ.ಯೋಗೇಶ್ವರ್ ನಾಯಕ ನಟನಾಗಿ ಅಭಿನಯಿಸಿರುವ 'ಸೈನಿಕ' ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಅರೆ, ಇದೇನಿದು ಕಾಂಗ್ರೆಸ್ನ ಬದ್ಧವೈರಿಯಂತಿರುವ... ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ವಾಕ್ಸಮರ ಸಾರುತ್ತಿರುವ ಸಿ.ಪಿ.ಯೋಗೇಶ್ವರ್ ಅವರನ್ನು ಕಂಡರೆ 'ಕೈ' ಕಾರ್ಯಕರ್ತರಿಗೆ ಅಷ್ಟೋಂದು ಅಭಿಮಾನವೇ? ಎಂದೆಲ್ಲ ಯೋಚಿಸಬೇಡಿ. ಇದು ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿಪ್ರತಿಮೆ ಬಳಿ ಶುಕ್ರವಾರ ಯೋಗೇಶ್ವರ್ ವಿರುದ್ಧ ಸಿನಿಮಾ ಸ್ಟೈಲ್ನಲ್ಲಿ ಕುಣಿದು ಕುಪ್ಪಳಿಸುತ್ತ ಆಕ್ರೋಶ ಹೊರಹಾಕಿದ ಪರಿ. ರಾಜ್ಯ ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿ.ಪಿ.ಯೋಗೇಶ್ವರ್ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಕೆಟ್ ಹಿಡಿದು ಸಿನಿಮಾ ಹಾಡಿಗೆ ಡಾನ್ಸ್ ಮಾಡುತ್ತ ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ವಿಧಾನ ಪರಿಷತ್ಗೆ ನಾಮನಿರ್ದೇಶನಗೊಂಡ ಬಳಿಕ ಸಿ.ಪಿ.ಯೋಗೇಶ್ವರ್, ಡಿಕೆಶಿ ಮತ್ತು ಎಚ್ಡಿಕೆ ಅವರನ್ನು ನಿವೃತ್ತ ಕುದುರೆಗಳು ಎಂದು ಲೇವಡಿ ಮಾಡಿದ್ದರು. ಇದಾದ ಬೆನ್ನಲ್ಲೇ ಮಾಜಿ
ಯೋಗೇಶ್ವರ್ರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಾರೀ ಸಂಚಲನ ಮೂಡಿಸಿತ್ತು. ಡಿಕೆ ಬ್ರದರ್ಸ್ ಎಚ್ಡಿಕೆಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಯೋಗೇಶ್ವರ್ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಪಿವೈ ಮುಖವಾಡಧಾರಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಬಕೆಟ್ ಹಿಡಿದುಕೊಂಡು 'ಬಕೆಟ್ ಯೋಗೇಶ್ವರ್' ಎಂದು ಘೋಷಣೆ ಕೂಗಿದರು. ಯೋಗೇಶ್ವರ್ ಅಭಿನಯದ ಸಿನಿಮಾ ಹಾಡಿಗೆ ಬಕೆಟ್ ಹಿಡಿದುಕೊಂಡೇ ಡ್ಯಾನ್ಸ್ ಮಾಡಿ ವ್ಯಂಗ್ಯವಾಡಿದರು.