More

    ಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್

    ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಲವು ಬಾರಿ ನನ್ನ ಕಾಲಿಗೆ ಬಿದ್ದಿದ್ದಾರೆ. ಅದರ ವಿಡಿಯೋ ನನ್ನ ಬಳಿ ಇದೆ. ಬೇಕಿದ್ದರೆ ರಾಜ್ಯದ ಜನತೆಯ ಮುಂದೆ ವಿಡಿಯೋ ಪ್ರದರ್ಶಿಸುವೆ’ ಎಂದು ಎಂಎಲ್ಸಿ ಸಿ.ಪಿ. ಯೋಗೇಶ್ವರ್ ಹೊಸ ಬಾಂಬ್​ ಸಿಡಿಸಿದ್ದಾರೆ.

    ‘ಅಧಿಕಾರ, ಹಣ ಸೇರಿದಂತೆ ಹಲವು ಅನುಕೂಲಕ್ಕೆ ಡಿಕೆಶಿ ಹಲವು ಬಾರಿ ನನ್ನ ಕಾಲಿಗೆ ಬಿದ್ದಿದ್ದಾರೆ. ಅದರ ವಿಡಿಯೋ ಇದೆ’ ಎಂದಿರುವ ಸಿಪಿವೈ, ‘ನಾನು ಕಾಂಗ್ರೆಸ್​ಗೆ ಬರುವೆ ಎಂದು ಡಿಕೆಶಿಯನ್ನು ಭೇಟಿಯಾಗಿಲ್ಲ. ಡಿಕೆಶಿ ಮನೆ ಹಾಗೂ ರಸ್ತೆಯಲ್ಲಿ ಕ್ಯಾಮರಾಗಳನ್ನು ಹಾಕಲಾಗಿದೆ. ದಯವಿಟ್ಟು ಅವರು ಸಾಕ್ಷಿಯನ್ನು ರಾಜ್ಯದ ಜನತೆ ಮುಂದಿಡಲಿ’ ಎಂದು ಪ್ರತಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ. ‘ಡಿಕೆಶಿ ಸಹೋದರರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ನನ್ನ ನಡುವೆ ವಿಷಬೀಜ ಬಿತ್ತಲು ವಿಫಲ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದನ್ನೂ ಓದಿರಿ ಎಚ್​ಡಿಕೆ- ಡಿಕೆಶಿ ಇಬ್ಬರೂ ನಿವೃತ್ತ ಕುದುರೆಗಳು: ಸಿ.ಪಿ.ಯೋಗೇಶ್ವರ್

    ನಿನ್ನೆ(ಗುರುವಾರ) ಸುದ್ದಿಗಾರರ ಬಳಿ ಮಾತನಾಡಿದ ಯೋಗೇಶ್ವರ್​, ‘ಡಿಕೆಶಿ ಸಹೋದರರು ಕುಮಾರಸ್ವಾಮಿಗೆ ತೊಂದರೆ ಕೊಡ್ತಿದ್ದಾರೆ. ಎಚ್​.ಡಿ. ಕುಮಾರಸ್ವಾಮಿ ನಮ್ಮ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡ್ತಿದ್ದಾರೆ.‌ ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಹಾಗೂ ನಮ್ಮ‌ ಪಕ್ಷದ ಜತೆಗೆ ಬನ್ನಿ’ ಎಂದು ಬಹಿರಂಗವಾಗಿಯೇ ಜೆಡಿಎಸ್​ಗೆ ಆಹ್ವಾನ ನೀಡಿದ್ದರು.

    ಈ ಹೇಳಿಕೆ ಹೊರ ಬಂದ ಕಲವೇ ಕ್ಷಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿಕೆಶಿ, ‘ಯೋಗೇಶ್ವರ್​ ರಾತ್ರೋರಾತ್ರಿ ಬಂದು ನನ್ನ ಕಾಲಿಗೆ ಬಿದ್ದು 15 ದಿನ ಆಗಿಲ್ಲ.. ಮತ್ತೆ ಆಟ ಶುರು ಮಾಡಿಕೊಂಡಿದ್ದಾನೆ, ಅವನಿಗೇನು ಮೆಂಟ್ಲಾ? ಹೀಗ್ಯಾಕೆ ಹಿಂಗ್​ ಆಡ್ತಾವ್ನೆ… ಅವನು ತಲೇನಾ ನನ್ನ ಕಾಲತ್ರ 5 ನಿಮಿಷ ಇಟ್ಟಿದ್ದ… ನಾನೇ ಹೋಗ್ಲಿ ಪಾಪ ಅಂತ ನಿನ್​ ಪಾರ್ಟಿಗೆ ಲಾಯಲ್​ ಆಗಿರು ಎಂದು ಹೇಳಿ ಕಳಿಸ್ದೆ… ‘ ಎಂದು ಯೋಗೇಶ್ವರ್​ ಅವರನ್ನು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಂಡಿದ್ದರು.

    ಇದನ್ನೂ ಓದಿರಿ video/ ಸಿ.ಪಿ.ಯೋಗೇಶ್ವರ್​ ಅಭಿನಯದ ‘ಸೈನಿಕ’ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದ ಕಾಂಗ್ರೆಸ್​ ಕಾರ್ಯಕರ್ತರು

    ಇದಾದ ಬಳಿಕ ಮತ್ತೆ ಆರೋಪ-ಪ್ರತ್ಯಾರೋಪ ಬಿರುಸುಗೊಂಡಿದ್ದು, ಇಂದು(ಶುಕ್ರವಾರ) ಯೋಗೇಶ್ವರ್​ ಪ್ರತಿಕಾ ಹೇಳಿಕೆ ಮೂಲಕ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ‘ಡಿಕೆಶಿ ಅವರೇ ನನ್ನ ಕಾಲಿಗೆ ಹಲವು ಬಾರಿ ಬಿದ್ದಿರುವ ವಿಡಿಯೋ ನನ್ನ ಬಳಿ ಇದೆ. ಬಿಜೆಪಿ ಮುಖಂಡರು ನನಗೆ ಸಚಿವ ಪದವಿ ನೀಡುವುದನ್ನು ತಪ್ಪಿಸುವ ದುರುದ್ದೇಶದಿಂದ ಡಿಕೆಶಿ ನಿರಾಧಾರ ಆರೋಪ ಮಾಡಿದ್ದಾರೆ. ಸಿಎಂ ಹಾಗೂ ಹೈಕಮಾಂಡ್ 6 ತಿಂಗಳ ಹಿಂದೆಯೇ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದೆ’ ಎಂದು ವಿವರಿಸಿದ್ದಾರೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಸಿಪಿವೈ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ವಿಧಾನ ಪರಿಷತ್​ಗೆ ನಾಮನಿರ್ದೇಶನ ಆಗುತ್ತಿದ್ದಂತೆ ಡಿಕೆಶಿ ಮತ್ತು ಎಚ್​ಡಿಕೆ ವಿರುದ್ಧ ವಾಕ್ಸಮರ ನಡೆಸಿದ್ದ ಸಿ.ಪಿ.ಯೋಗೇಶ್ವರ್, ‘ಡಿಕೆಶಿ ಮತ್ತು ಎಚ್​ಡಿಕೆ ಇಬ್ಬರೂ ನಿವೃತ್ತ ಕುದುರೆಗಳು’ ಎಂದು ಕಟುವಾಗಿ ಟೀಕಿಸಿದ್ದರು. ಅದಾದ ಬಳಿಕ ಎಚ್​ಡಿಕೆ ಪರ ಮೃದುಧೋರಣೆ ಪ್ರದರ್ಶಿಸಿದ್ದರು.

    ಅಂಬೇಡ್ಕರ್​ಗೆ ಊಟ ಬಡಿಸಿದ್ದ ಬೆಳಗಾವಿಯ ಅಜ್ಜಿ ಸಿದ್ದವ್ವ ಮೇತ್ರಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts