ಪೋಟೋ ಅಳವಡಿಕೆ ವಿಚಾರ: ಕಛೇರಿಯಲ್ಲೇ ಬಡಿದಾಡಿಕೊಂಡ 'ಕೈ' ಕಾರ್ಯಕರ್ತರು!

Untitled design (89)
Published on

ಕೋಲಾರ: ಬ್ಯಾನರ್​ನಲ್ಲಿ ತಮ್ಮ ನಾಯಕರ ಫೋಟೋ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದ್ದು, ಮಾತಿಗೆ ಮಾತು ಬೆಳೆದು ಹಾಜರಾಗಿದ್ದ ಕಛೇರಿಯಲ್ಲೇ ಬಡಿದಾಡಿಕೊಂಡ ಘಟನೆ ಕೋಲಾರದಲ್ಲಿ ವರದಿಯಾಗಿದೆ.

ಬ್ಯಾನರ್​ನಲ್ಲಿ ನಾಯಕರ ಪೋಟೋ ಅಳವಡಿಕೆ ವಿಚಾರದಲ್ಲಿ ಜಟಾಪಟಿ ಭುಗಿಲೆದ್ದಿದೆ. ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಬಣ ಮತ್ತು ಊರುಬಾಗಿಲು ಶ್ರೀನಿವಾಸ್ ಗುಂಪಿನ ನಡುವೆ ಹೊಡೆದಾಟ ಸಂಭವಿಸಿದೆ.

ಚುನಾವಣಾ ದಿನದಂದು ಬೂತ್​ಗಳಿಗೆ ಏಜೆಂಟ್ ನೇಮಕದ ಬಗ್ಗೆ ಕೆಪಿಸಿಸಿ ಕೋಲಾರ ಕಾಂಗ್ರೆಸ್ ಕಛೇರಿಯಲ್ಲಿ ಪಕ್ಷದ ಉಸ್ತುವಾರಿ ರಾಜ್​ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಫ್ಲೆಕ್ಸ್​ನಲ್ಲಿ ಯಾವುದೇ ನಾಯಕರ ಪೋಟೋ ಇಲ್ಲದಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದು, ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net