ಕಾಂಗ್ರೆಸ್​ ವಕ್ತಾರ ರಾಜೀವ್​ ತ್ಯಾಗಿ ನಿಧನ...

Rajeev Tyagi
Published on

ನವದೆಹಲಿ: ಕಾಂಗ್ರೆಸ್​ ಮುಖಂಡ, ವಕ್ತಾರ ರಾಜೀವ್​ ತ್ಯಾಗಿ ಅವರು ಇಂದು ಮೃತಪಟ್ಟಿದ್ದಾರೆ.

ಇಂದು ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಬಂದವರು ಒಮ್ಮೆಲೆ ಅಸ್ವಸ್ಥರಾಗಿದ್ದಲ್ಲದೆ, ತಮ್ಮ ಮನೆ ವೈಶಾಲಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದಾರೆ.

ಅವರನ್ನು ಕೂಡಲೇ ಘಾಜಿಯಾಬಾದ್​​ನಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸ್ತಂಭನಕ್ಕೆ ಒಳಗಾದ ರಾಜೀವ್​ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಪ್ರಯೋಜನ ಆಗಲಿಲ್ಲ. ಇಂದು ಸಂಜೆ 5ಗಂಟೆಗೆ ಟಿವಿ ಡಿಬೇಟ್​​ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ರಾಜೀವ್​ ಟ್ವೀಟ್​ ಮಾಡಿದ್ದರು. ಇದೇ ಅವರ ಕೊನೇ ಟ್ವೀಟ್​ ಆಗಿದೆ. ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಹೊಣೆಯನ್ನು ಪೊಲೀಸರ ತಲೆಗೆ ಕಟ್ಟಿದ ಕಾಂಗ್ರೆಸ್… ಇಡೀ ದಿನ ರಾಜಕೀಯ ಮೇಲಾಟ

ರಾಜೀವ್​ ತ್ಯಾಗಿ ಅವರ ನಿಧನಕ್ಕೆ ಪಕ್ಷ ತೀವ್ರ ದುಃಖ ವ್ಯಕ್ತಪಡಿಸಿದೆ. ನಿಜವಾದ ದೇಶಭಕ್ತನನ್ನು ಕಳೆದುಕೊಂಡಿದ್ದೇವೆ. ರಾಜೀವ್​ ಸಾವಿನ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಿದೆ.

ಹಾಗೇ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ. ಕೆ.ಸಿ.ವೇಣುಗೋಪಾಲ್​ ಸೇರಿ ಕಾಂಗ್ರೆಸ್​ನ ಹಲವು ಮುಖಂಡರು ಟ್ವೀಟ್​ ಮೂಲಕ ರಾಜೀವ್​ ತ್ಯಾಗಿ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ಸಂಬಿತ್​ ಪಾತ್ರಾ ರಾಜೀವ್​ ನಿಧನದ ಸುದ್ದಿ ಕೇಳಿ ಶಾಕ್​ ಆಯಿತು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net