ಅ.12ರಂದು ಜಿಲ್ಲೆಗೆ ಭಾರತ್ ಜೋಡೋ ಯಾತ್ರೆ

ddddd
Published on

ಚಿತ್ರದುರ್ಗ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ಅ.12 ರಂದು ಚಿತ್ರದುರ್ಗ ಜಿಲ್ಲೆಗೆ ಕಾಲಿಡ ಲಿದೆ ಎಂದು ಎಐಸಿಸಿ ಕಾರ‌್ಯದರ್ಶಿ,ಯಾತ್ರೆ ಕರ್ನಾಟಕದ ಉಸ್ತುವಾರಿ ಮಯೂರ್ ಜಯಕುಮಾರ್ ಹೇಳಿದರು.

ಪಕ್ಷದ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಯಾತ್ರೆಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ,ಬಿಜೆಪಿ ದೇಶವನ್ನು ಹಾಳು ಮಾಡಿದೆ. ಇಂಥ ಕಠಿಣ ಸನ್ನಿವೇಶದಲ್ಲಿ ದೇಶವನ್ನು ಉಳಿಸುವ ಪಣದೊಂದಿಗೆ ರಾಹುಲ್‌ಗಾಂಧಿ ಪಾದಯಾತ್ರೆ ನಡೆಸುತ್ತಿದ್ದು,ಜಿಲ್ಲೆಯಲ್ಲಿ ಯಾತ್ರೆ ಯಶಸ್ವಿಗೊಳಿಸ ಬೇಕಾ ದ ಹೊಣೆ ಪಕ್ಷದ ಕಾರ‌್ಯಕರ್ತರು,ಮುಖಂಡರ ಮೇಲಿದೆ ಎಂದರು.

ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿ,ಬಿಜೆಪಿಯಿಂದ ದೇಶಕ್ಕೆ ಹಾನಿಯೇ ಹೊರತು ಖಂಡಿತಾ ಒಳಿತು ಮಾಡುವುದಿಲ್ಲ. ದೇಶವನ್ನು ಕಟ್ಟುವ ಶಕ್ತಿ ಬಿಜೆಪಿಗೆ ಇಲ್ಲ. ಅದೇನಿದ್ದರೂ ಕಾಂಗ್ರೆಸ್ಸಿನಿಂದ ಮಾತ್ರ ಸಾಧ್ಯವೆಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ ಪೀರ್,ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ,ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,ಯು.ಲಕ್ಷ್ಮೀಕಾಂತ್,ಆರ್.ಪ್ರಕಾಶ್ ಮತ್ತಿತರರು ಇದ್ದರು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net