ಕಾಂಗ್ರೆಸ್ಸಿಗರ ಷಡ್ಯಂತ್ರಕ್ಕೆ ಫುಲ್ ಸ್ಟಾಪ್: ಎ.ಎಸ್.ಪಾಟೀಲ ನಡಹಳ್ಳಿ

bjpo
Published on

ಬೆಂಗಳೂರು:
ರಾಜ್ಯದ ಜನರು ಯಡಿಯೂರಪ್ಪನವರ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಪೂರಕವಾಗಿ ಹೈಕೋರ್ಟ್ ತೀರ್ಪು ಬಂದಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೇಸು ದಾಖಲಿಸಿದ ಬಳಿಕ ಯಡಿಯೂರಪ್ಪನವರು ವಿಚಾರಣೆ ಎದುರಿಸಿದ್ದರು. ಹೇಳಿಕೆ, ಧ್ವನಿ ಸ್ಯಾಂಪಲ್ ಕೊಟ್ಟಿದ್ದರು. ದೆಹಲಿಗೆ ಹೋಗಿರುವ ಕಾರಣ 17ರಂದು ವಿಚಾರಣೆ ಹಾಜರಾಗುವುದಾಗಿ ಪತ್ರದ ಮೂಲಕ ಸಿಐಡಿಗೆ ತಿಳಿಸಿದ್ದರೂ ಕೂಡ ಅವರನ್ನು ಬಂಧಿಸಬೇಕೆಂಬ ದುರುದ್ದೇಶ ಸರಕಾರಕ್ಕೆ ಇತ್ತು. ಆ ದುರುದ್ದೇಶ ವಿಫಲವಾಗಿದೆ. ಕಾಂಗ್ರೆಸ್ ನಾಯಕರ ಷಡ್ಯಂತ್ರಕ್ಕೆ ಹೈಕೋರ್ಟ್ ಪೂರ್ಣವಿರಾಮ (ಫುಲ್ ಸ್ಟಾಪ್) ಹಾಕಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ದುರುದ್ದೇಶದಿಂದ ಹಾಕಿದ ಪ್ರಕರಣದಲ್ಲಿ ಪೋಕ್ಸೊ ಸೆಕ್ಷನ್‌ಗಳನ್ನು ಸೇರಿಸಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡಿ, ಷಡ್ಯಂತ್ರದ ಕೇಸು ದಾಖಲಿಸಿದ್ದರು. ಈ ಕೇಸಿಗೆ ಸಂಬಂಧಿಸಿ ಹೈಕೋರ್ಟ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ. ಇದನ್ನು ಬಿಜೆಪಿ ಸ್ವಾಗತ ಮಾಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net