ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ; ಕೆಲವರು ಮುಳುಗ್ತಾರೆ ಎಂದ ಗೃಹ ಸಚಿವರು!

Dr G Parameshwar
Published on

ಬೆಂಗಳೂರು:

ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಸಮುದ್ರದಲ್ಲಿ ಕೆಲವರು ಸಕ್ಸಸ್ ಆಗ್ತಾರೆ. ಕೆಲವರು ಮುಳುಗಿಯೂ ಹೋಗ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿಕೊಂಡು ಯಾರೇ ಬಂದರೂ ಸ್ವಾಗತ ಎಂದು ಹೇಳಿದರು.

ಚಂದ್ರಯಾನದ ಸಾಧನೆ ನಮಗೆಲ್ಲರಿಗೂ ಸಂತೋಷ ಮತ್ತು ಸಂತಸ ತಂದಿದೆ ಎಂದು ಹೇಳಿದರು.

್ಯಾಕ್ಟ್ ಚೆಕ್ ಕಮಿಟಿ

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ್ಯಾಕ್ಟ್ ಚೆಕ್ ಕಮಿಟಿಗೆ ನಿರ್ಧರಿಸಲಾಗಿದೆ. ಐಟಿ ಇಲಾಖೆ ತಾಂತ್ರಿಕ ನೆರವು ನೀಡಲಿದೆ. ಶಿಕ್ಷೆ ಇನ್ನಿತರ ವಿಷಯಗಳನ್ನು ಪೊಲೀಸ್ ಇಲಾಖೆ ತೀರ್ಮಾನಿಸಲಿದೆ ಎಂದರು.

ನೈಸ್ ಯೋಜನೆ

ನೈಸ್ ಯೋಜನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಟಿ.ಬಿ.ಜಯಚಂದ್ರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಯೋಜನೆಗಳಲ್ಲಿಯೂ ಲೋಪ ದೋಷಗಳು ಇದ್ದೆ ಇರುತ್ತವೆ. ಮೈಸೂರು ರಸ್ತೆಯಲ್ಲಿ ನೂನ್ಯತೆಗಳು ಇಲ್ಲವಾ? ಎಂದು ಕೇಳಿದರು.

ನೈಸ್ ಯೋಜನೆ ಬಗ್ಗೆ ಕುಮಾರಸ್ವಾಮಿ ಅವರು ಮೊದಲಿಂದಲೂ ಹೋರಾಟ ಮಾಡುತ್ತಿದ್ದಾರೆ. ತಪ್ಪನ್ನು ಸರಿಪಡಿಸಿಕೊಂಡು ಹೋಗುವುದು ಮುಖ್ಯ. ರಸ್ತೆ ಆಧುನೀಕರಣಕ್ಕಾಗಿ ಯೋಜನೆ ಆಗಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net