

ನವದೆಹಲಿ: ಸದ್ಯ ರಾಜಸ್ಥಾನ ರಾಜಕೀಯದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. ಅದರಲ್ಲೂ ರಾಜಕೀಯ ಪಕ್ಷಗಳಂತೂ ಸೂಕ್ಷ್ಮವಾಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ.
ಇದೀಗ ಆಮ್ ಆದ್ಮಿ ಪಕ್ಷವೂ ಕೂಡ(ಆಪ್) ಸಿಕ್ಕಿದ್ದೇ ಅವಕಾಶ ಎಂದು ಕಾಂಗ್ರೆಸ್ನ್ನು ಅಪಹಾಸ್ಯ ಮಾಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವೇ ಇಲ್ಲ. ಕೊನೇ ಉಸಿರು ಎಳೆಯುತ್ತಿದೆ. ಸದ್ಯ ವೆಂಟಿಲೇಟರ್ನಲ್ಲಿ ಇದೆ ಎಂದು ಆಪ್ ಶಾಸಕ ಮತ್ತು ರಾಷ್ಟ್ರೀಯ ವಕ್ತಾರ ರಾಘವ್ ಚಧಾ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಅವರು, ಈ ಕೊವಿಡ್-19 ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ಗಳನ್ನು ಹೆಚ್ಚಿಸುವ ಬಗ್ಗೆ, ಕರೊನಾ ಚೇತರಿಕೆ ಪ್ರಮಾಣ ಹೆಚ್ಚಿಸುವ ಬಗ್ಗೆ ಯೋಚನೆ ಮಾಡುತ್ತಿವೆ. ಎಲ್ಲರೂ ಒಗ್ಗಟ್ಟಾಗಿ ಕರೊನಾ ವಿರುದ್ಧ ಹೋರಾಟ ನಡೆಸುತ್ತಿವೆ. ಆದರೆ ರಾಜಸ್ಥಾನದಲ್ಲಿ ಶಾಸಕರ ಖರೀದಿ, ಮಾರಾಟ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಅತ್ಯಂತ ಕೆಟ್ಟ ರಾಜಕಾರಣ ನಡೆಸುತ್ತಿದೆ. ಇದರಿಂದ ದೇಶದ ಭವಿಷ್ಯಕ್ಕೆ ಏನಾದರೂ ಉಪಯೋಗ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೆಡ್ ಬಾಕ್ಸ್ನಲ್ಲಿ ಬಿದ್ದ 84ವರ್ಷದ ಅಜ್ಜಿ ಬದುಕುಳಿಯಲು ಕಾರಣವಾಯ್ತು ಸಿಸಿಟಿವಿ…!
15 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಇದೀಗ ವೆಂಟಿಲೇಟರ್ನಲ್ಲಿದೆ. ಈ ಪಕ್ಷವನ್ನು ಪ್ಲಾಸ್ಮಾ ಥೆರಪಿಯಾಗಲಿ, ಹೈಡ್ರೋಕ್ಸಿಕ್ಲೊರೊಕ್ವಿನ್ ಆಗಲಿ ಉಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಜನರು ತಮ್ಮ ಮತವನ್ನು ಕಾಂಗ್ರೆಸ್ಗೆ ಕೊಡುತ್ತಾರೆ. ಆ ಪಕ್ಷ ಅಧಿಕಾರವನ್ನು ಬಿಜೆಪಿಗೆ ಮಾರಾಟ ಮಾಡುತ್ತದೆ ಎಂದು ಕುಟುಕಿದ್ದಾರೆ.(ಏಜೆನ್ಸೀಸ್)