

ಹರಿಯಾಣ: ರಾಜ್ಯದ ಲೋಹರು ವಿಧಾನಸಭಾ ಕ್ಷೇತ್ರದ MLA ರಾಜ್‌ಬೀರ್ ಫಾರ್ತಿಯಾ ಅವರ ಪುತ್ರ ಯೋಗೇಶ್ ಫಾರ್ತಿಯಾ ಅವರು ಜಿಂದ್‌ನ ತಮನ್ನಾ ಅವರನ್ನು ವಿವಾಹವಾಗಲಿದ್ದಾರೆ. ಇದೀಗ ಈ ಮದುವೆ ರಾಜ್ಯದ್ಯಾಂತ ಸಾಕಷ್ಟು ಸಡಗರವನ್ನು ಉಂಟುಮಾಡಿದೆ.
ಹೌದು, ಈ ವಿವಾಹ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಮದುವೆಗೆ ಲಕ್ಷಾಂತರ ಜನರನ್ನು ಆಹ್ವಾನಿಸಲಾಗಿದೆ. ಅವರ ವಿವಾಹ ವಿಧಿವಿಧಾನಗಳು ಮೂರು ದಿನಗಳಿಂದ ನಡೆಯುತ್ತಿದ್ದು, ಅಕ್ಟೋಬರ್ 30 ರಂದು ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ.
ವರದಿ ಪ್ರಕಾರ, ಲೋಹರು ಕ್ಷೇತ್ರದ ಮಂಡಿಯಲ್ಲಿ ನಡೆಯುವ ಆರತಕ್ಷತೆಗೆ 150 ಹಳ್ಳಿಗಳ ಜನರನ್ನು ಆಹ್ವಾನಿಸಲಾಗಿದೆ. ಮದುವೆ ಔತಣಕೂಟಕ್ಕಾಗಿ ಲೋಹರು ಮಂಡಿಯಲ್ಲಿ ಐದು ಎಕರೆ ವಿಸ್ತೀರ್ಣದ ಪೆಂಡಾಲ್ ನಿರ್ಮಿಸಲಾಗಿದ್ದು, ಸುಮಾರು 90 ರಿಂದ 100,000 ಜನರಿಗೆ ಆಹಾರ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ ಪುತ್ರ ಯೋಗೇಶ್ ಫರ್ತಿಯಾ ತಮ್ಮದೇ ಆದ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾದ ರಾಜ್‌ಬೀರ್ ಫಾರ್ತಿಯಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದು ವರ್ಷದ ಹಿಂದೆ, ಅವರ ಮಗಳು ಐಎಎಸ್ ಅಧಿಕಾರಿಯನ್ನು ವಿವಾಹವಾದರು. ಈಗ ಅವರ ಮಗ ವರನಾಗಲಿದ್ದಾನೆ. ಕಳೆದ ಮೂರು ದಿನಗಳಿಂದ ವಿವಾಹ ಆಚರಣೆಗಳು ನಡೆಯುತ್ತಿದ್ದು, ಮದುವೆಗೆ ಇನ್ನಷ್ಟು ಮೆರುಗು ನೀಡಲು ಕಲಾವಿದರನ್ನು ಆಹ್ವಾನಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಜಿಂದ್ ಡೈರಿ ಉದ್ಯಮಿ ಬಲ್ಜೀತ್ ಸಿಂಗ್ ರೆಧು ಅವರ ಪುತ್ರಿ ತಮನ್ನಾ ಮತ್ತು ಯೋಗೇಶ್ ಅವರ ವಿವಾಹ ವಿಧಿವಿಧಾನಗಳು ಪ್ರಾರಂಭವಾಗಿವೆ. ತಮನ್ನಾ ಇಂಗ್ಲೆಂಡ್‌ನಲ್ಲಿ ವಾಣಿಜ್ಯ ಅಧ್ಯಯನ ಮಾಡಿ ಈಗ ತನ್ನ ತಂದೆಗೆ ಅವರ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)