

ಉತ್ತರಪ್ರದೇಶ: ಶಾಂತಿ ಕದಡಿದ್ದಕ್ಕಾಗಿ 1ನೇ ತರಗತಿ ವಿದ್ಯಾರ್ಥಿಗೆ ನ್ಯಾಯಾಲಯದಿಂದ ನೋಟಿಸ್ ಪಡೆದ ಘಟನೆ ಇತ್ತೀಚಿಗೆ ಉತ್ತರಪ್ರದೇಶದ ಅಲಿಘಡದಲ್ಲಿ ಬೆಳಕಿಗೆ ಬಂದಿದೆ.
ಹೌದು, ಆ ಚಿಕ್ಕ ಮಗುವಿಗೆ ಕೋರ್ಟ್ ನೋಟಿಸ್ ನೀಡಲು ಮಾಡಿದ ತಪ್ಪಾದರೇನು? ಎಂದು ಮನೆಯರು ಸೇರಿದಂತೆ ಸುತ್ತಮುತ್ತಲಿನ ಜನರು ಶಾಕ್ ಆಗಿದ್ದಾರೆ. ಆದರೆ, ಪೋಲಿಸರು ಮಾಡಿದ ಆ ಒಂದು ತಪ್ಪಿನಿಂದಾಗಿ ಮಗು ಕಾನೂನು ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಆದಾಗ್ಯೂ, ಪೊಲೀಸರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ನಿರ್ಲಕ್ಷ್ಯ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ, ಮಗುವಿನ ವಿರುದ್ಧ ಹೊರಡಿಸಲಾದ ನೋಟಿಸ್ ಅನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ಇದು ನೆರೆ ಮನೆಯರ ಎರಡು ಕುಟುಂಬಗಳ ಗಲಾಟೆ. ಯುಪಿ ಕ್ವಾರ್ಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿರುವ ಡಾ.ಹಿತೇಶ್ ಚೌಹಣ್ ಈ ಪ್ರದೇಶದ ಸ್ಟೀಟ್ ನಂ.1ನಲ್ಲಿ ವಾಸ ಮಾಡುತ್ತಿದ್ದಾರೆ. ಇವರ ಮನೆ ಮಗ್ಗುವಲ್ಲಿ 50 ವರ್ಷದ ಸುಲ್ತಾನ್ ಸಿಂಗ್ ವಾಸ ಮಾಡುತ್ತಿದ್ದಾರೆ. ಹಿತೇಶ್ ಅವರು ತಮ್ಮ ಮನೆಯ ಬಾಗಿಲನ್ನು ತೆರದಿದ್ದಾರೆ. ಇದರಿಂದ ದಿನನಿತ್ಯ ನಮಗೆ ಅನಾನುಕೂಲತೆ ಉಂಟಾಗಿದೆ ಎಂದು ಸುಲ್ತಾನ್ ಸಿಂಗ್ ಹಿತೇಶ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಕ್ವಾರ್ಸಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ (ಎಸ್‌ಐ) ತನಿಖೆ ನಡೆಸಲು ಹಿತೇಶ್ ಅವರ ಮನೆಗೆ ಹೋಗಿ ಅವರ ಮನೆಯ ದಾಖಲೆಗಳನ್ನು ಕೇಳಿದರು. "ದೂರು ಬಾಗಿಲಿನ ಬಗ್ಗೆಯಾಗಿದ್ದರೆ, ನಿಮಗೆ ದಾಖಲೆಗಳು ಏಕೆ ಬೇಕು? ನಾವು ಯಾವುದೇ ಬಾಗಿಲುಗಳನ್ನು ತೆರೆದಿಲ್ಲ ಅಥವಾ ಬೇರೆ ಏನನ್ನೂ ಮಾಡಿಲ್ಲ" ಹಿತೇಶ್ ನಿರಾಕರಿಸಿದರು.
ಇನ್ಸ್‌ಪೆಕ್ಟರ್ ಎರಡೂ ಕಡೆಯ ಕುಟುಂಬ ಸದಸ್ಯರ ಹೆಸರುಗಳು, ವಿಳಾಸಗಳು ಮತ್ತು ವಯಸ್ಸಿನ ವಿವರಗಳನ್ನು ಬರೆದರು. ತನಿಖೆ ಪೂರ್ಣಗೊಂಡ ನಂತರ ಅವರು ತಮ್ಮ ವರದಿಯನ್ನು ಐಜಿಆರ್‌ಎಸ್‌ಗೆ(ದೂರು ಸಲ್ಲಿಸುವ ಆನ್ಲೈನ್ ಪೋರ್ಟ್) ಸಲ್ಲಿಸಿದರು.
ಪೊಲೀಸರು ತನಿಖಾ ವರದಿಯ ಮೇರೆಗೆ ಎಸಿಎಂ II ಆಫೀಸರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕ್ರಮ ಕೈಗೊಂಡಿತು. ದೂರುದಾರ ಸುಲ್ತಾನ್ ಸಿಂಗ್ ಮತ್ತು ಇನ್ನೊಂದು ಪಕ್ಷವಾದ ಹಿತೇಶ್ ಅವರ ಮಗನನ್ನು ಶಾಂತಿಗೆ ಭಂಗ ತರುವ ಭಯದಿಂದ ನಿರ್ಬಂಧಿಸುವಂತೆ ವರದಿಯಲ್ಲಿ ನಿರ್ದಿಷ್ಟಪಡಿಸಲಾಗಿದೆ. 2025ರ ಅ.10 ರಂದು ನ್ಯಾಯಾಲಯವು ನೋಟಿಸ್ ಜಾರಿ ಮಾಡಿತು. ಈ ನೋಟಿಸ್ ನೋಡಿದ ಕುಟುಂಬಸ್ಥರು ಗಾಬರಿಯಾಗಿದ್ದಾರೆ.
ಮಗುವಿನ ವಯಸ್ಸನ್ನು 6 ವರ್ಷಗಳ ಬದಲಿಗೆ 40 ವರ್ಷಗಳು ಎಂದು ವರದಿ ಪಟ್ಟಿ ಮಾಡಲಾಗಿರುವುದರಿಂದ ಅವನ ವಿರುದ್ಧ ನೋಟಿಸ್ ನೀಡಲಾಗಿದೆ ಎಂದು ಆಡಳಿತವು ಒಪ್ಪಿಕೊಂಡಿದೆ. ಈ ವಿಷಯ ತಮ್ಮ ಗಮನಕ್ಕೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಸಬ್ ಇನ್ಸ್‌ಪೆಕ್ಟರ್ ನಿರ್ಲಕ್ಷ್ಯ. ಹೆಸರು, ವಿಳಾಸ ಮತ್ತು ವಯಸ್ಸನ್ನು ಗಮನಿಸುವಲ್ಲಿ ತಪ್ಪಾಗಿದೆ. ಸಬ್ ಇನ್ಸ್‌ಪೆಕ್ಟರ್ ನಿರ್ಲಕ್ಷ್ಯದ ವಿರುದ್ಧದ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ. ನೋಟಿಸ್ ರದ್ದುಗೊಳಿಸುವಂತೆ ಕೋರಿ ವರದಿಯನ್ನು ಎಸಿಎಂ ನ್ಯಾಯಾಲಯಕ್ಕೂ ಕಳುಹಿಸಲಾಗುತ್ತಿದೆ.(ಏಜೆನ್ಸೀಸ್)