ಪೊಲೀಸರಿಂದ ಲಂಚಕ್ಕೆ ಬೇಡಿಕೆ! ಜನತಾ ದರ್ಶನದಲ್ಲಿ ಕಾಂಗ್ರೆಸ್ ಶಾಸಕರಿಂದಲೇ ಅಳಲು

Vijayapur MLA
Published on

ವಿಜಯಪುರ: ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿದ "ಜನತಾ ದರ್ಶನ" ಎಂಬ ಜನಪರ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಶಾಸಕರೇ ಅಳಲು ತೋಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ !

ಹೌದು, ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವೃದ್ದೆಯೊಬ್ಬಳ ಸಮಸ್ಯೆ ಮುಂದಿಟ್ಟುಕೊಂಡು ಪೊಲೀಸ್ ಇಲಾಖೆಯ ಕಾರ್ಯವೈಖರಿ ಅನಾವರಣಗೊಳಿಸಿದ ನಾಗಠಾಣ ಶಾಸಕ ವಿಠಲ ಕಟಕಧೋಂಡ ಅಸಹಾಯಕತೆ ಮತ್ತು ಖೇದ ಒಟ್ಟಿಗೆ ವ್ಯಕ್ತಪಡಿಸಿದರು.

ಜನತಾ ದರ್ಶನಕ್ಕೆ ಬರುವ ಮುಂಚೆ ಬಂಜಾರಾ ಸಮುದಾಯದ ಮಹಿಳೆಯೊಬ್ಬಳು ಬಂದು ತಮ್ಮ ಬಳಿ ತೋಡಿಕೊಂಡ ಅಳಲನ್ನು ಯಥಾವತ್ತಾಗಿ ಬಿಚ್ಚಿಟ ಶಾಸಕ ಕಟಕಧೋಂಡ, ಬಂಜಾರಾ ಸಮುದಾಯದ ಮಹಿಳೆಯೊಬ್ಬಳು ತಮ್ಮ ಬಳಿ ಬಂದು ಕೆಲವು ದಿನಗಳ ಹಿಂದೆ ಮನೆ ಕಳ್ಳತನವಾಗಿದ್ದು ಎಲ್ಲವೂ ಕಳೆದುಕೊಂಡು ಬದುಕು ಬೀದಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರೇ ಹಣ ಕೇಳುತ್ತಿದ್ದಾರೆಂದು ಅಲವತ್ತುಕೊಂಡಿದ್ದು, ಈ ಪ್ರಕರಣ ಬಹಳ ಖೇದವನ್ನುಂಟು ಮಾಡಿದೆ ಎಂದರು.

ಸಮಾಜದಲ್ಲಿ ನೈತಿಕ ವ್ಯವಸ್ಥೆ ಯಾವ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಹೀಗಾದರೆ ಜನರಿಗೆ ನ್ಯಾಯ ಕಲ್ಪಿಸುವುದು ಹೇಗೆಂಬುದು ಎಲ್ಲರೂ ವಿಚಾರಿಸಬೇಕಿದೆ ಎಂದರು. ವೇದಿಕೆ ಮೇಲೆ ಎಸ್ ಪಿ ರಿಷಿಕೇಶ ಸೋನವಾನೆ ಕೂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net