ರಾಜ್ಯದ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿಯೂ 'ಕೈ' ಮುನ್ನಡೆ! ಕಮಲಕ್ಕೆ ಆಘಾತ | BJP

ವಿಜಯವಾಣಿ - 2024-11-23T102149.195
Published on

ಬೆಂಗಳೂರು: ಕರ್ನಾಟಕ ಉಪಚುನಾವಣೆಯ ಫಲಿತಾಂಶದಲ್ಲಿ ಇದೀಗ ಲೆಕ್ಕಾಚಾರಗಳು ಬದಲಾಗಿದ್ದು, ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕಾಂಗ್ರೆಸ್​ಗೆ ಮುನ್ನಡೆ ದೊರಕಿದೆ.

ಸಂಡೂರಿನಲ್ಲಿ 'ಕೈ' ಅಭ್ಯರ್ಥಿ ಅನ್ನಪೂರ್ಣ, ಚನ್ನಪಟ್ಟಣ್ಣದಲ್ಲಿ ಸಿಪಿ ಯೋಗೇಶ್ವರ್​ ಮತ್ತು ಶಿಗ್ಗಾಂವಿ ಯಾಸಿರ್ ಪಠಾಣ್​ಗೆ ಭಾರೀ ಮುನ್ನಡೆ ಲಭಿಸಿದೆ. ಈ ಮತಗಳ ಅಂತರ ಬಿಜೆಪಿಗೆ (BJP) ದೊಡ್ಡ ಆಘಾತ ನೀಡಿದ್ದು, ಪಕ್ಷದ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗುವ ಸಾಧ್ಯತೆಗಳು ಹೆಚ್ಚಿವೆ.

ಸದ್ಯ ಮೂರು ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net