ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ; ದ್ವೇಷದ ವಿರುದ್ಧ ಪ್ರೀತಿಯ ಗೆಲುವು ಎಂದ ಕಾಂಗ್ರೆಸ್ ನಾಯಕರು

Rahul Gandhi
Published on

ನವದೆಹಲಿ: 2019ರ ಲೋಕಸಭೆ ಚುನಾವನನೆ ಪ್ರಚಾರದ ವೇಳೆ ಮೊದಿ ಉಪನಾಮದ ಕುರಿತು ವ್ಯಂಗ್ಯವಾಡಿ ಸಂಸತ್​ ಸ್ಥಾನದಿಂದ ಅನರ್ಹಗೊಂಡು ಜೈಲು ಶಿಕ್ಷೆಗೆ ಗುರಿಯಾಗಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ಸುಪ್ರೀಂ ಕೋರ್ಟ್​ ದೊಡ್ಡ ರಿಲೀಫ್​ ನೀಡಿದ್ದು, ಇದರಿಂದ ಅವರು ತಮ್ಮ ಸಂಸತ್​ ಸ್ಥಾನವನ್ನು ಮರಳಿ​ ಪಡೆಯಲಿದ್ದಾರೆ.

ಸೂರತ್​ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್​ ತಡೆ ನೀಡಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್​ ಪಕ್ಷದ ನಾಯಕರು ಟ್ವೀಟ್​ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಪಿತೂರಿ ಬಯಲಾಗಿದೆ

ಈ ಕುರಿತು ಟ್ವೀಟ್​ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ಕೋರ್ಟ್​ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ನಮಗೆ ನ್ಯಾಯ ಸಿಕ್ಕಿದ್ದು, ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನವನ್ನು ಎತ್ತಿ ಹಿಡಿಯಲಾಗಿದೆ.

ರಾಹುಲ್​ ಗಾಂಧಿಯವರ ಪ್ರಕರಣದಲ್ಲಿ ಬಿಜೆಪಿಯ ಸಂಪೂರ್ಣ ಪಿತೂರಿ ಬಯಲಾಗಿದೆ. ವಿರೋಧ ಪಕ್ಷದ ನಾಯಕರನ್ನು ದುರುದ್ದೇಶಪೂರ್ವಕವಾಗಿ ಗುರಿ ಮಾಡುತ್ತಿರುವ ಬಿಜೆಪಿಗೆ ಇದು ನಿಲ್ಲಿಸಲು ಸೂಕ್ತ ಸಮಯವಾಗಿದೆ. ಕಳೆದ 10 ವರ್ಷಗಳಲ್ಲಿ ವೈಫಲ್ಯ ಕಂಡಿರುವ ಇವರು ಇನ್ನಾದರು ಜನಾದೇಶವನ್ನು ಗೌರವಿಸಿ ಆಡಳಿತ ನಡೆಸುವುದು ಉತ್ತಮ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್​ ಮಾಡಿದ್ದಾರೆ.

ಪ್ರಜಾಪ್ರಭುತ್ವಕ್ಕೆ ಸಂದ ಜಯ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಾತನಾಡಿ ಸತ್ಯಕ್ಕೆ ಯಾವಾಗಲೂ ಜಯ ನಿಶ್ಚಿತ. ಏನೇ ಅಡ್ಡ ಬಂದರು ನನ್ನ ಕರ್ತವ್ಯ ಹಾಗೆಯೇ ಉಳಿದಿದೆ. ಭಅರತದ ಕಲ್ಷಪನೆಯನ್ನು ರಕ್ಷಿಸಿ. ಪ್ರಕರಣದ ವಿಚಾರವಾಗಿ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗು ಧನ್ಯವಾದಗಳು ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್​ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವಾಗಿದ್ದು, ಸತ್ಯಮೇವ ಜಯತೆ- ಜೈ ಹಿಂದ್​ ಎಂದು ಎಐಸಿಸಿ ಟ್ವೀಟ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net