ಪಾವಗಡ | 'ಕೈ'ನಲ್ಲಿ ಬಂಡಾಯ ಸ್ಫೋಟ! ಕಾಂಗ್ರೆಸ್ ಮುಖಂಡರಿಂದ ಗೌಪ್ಯ ಸಭೆ

Congress
Published on

ತುಮಕೂರು: ಪಾವಗಡ ಹಾಲಿ ಕಾಂಗ್ರೆಸ್ ಶಾಸಕ ವೆಂಕಟರವಣಪ್ಪ ಪುತ್ರ ಎಚ್.ವಿ. ವೆಂಕಟೇಶ್​ಗೆ ಕೈ ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಪಕ್ಷದೊಳಗೆ ಬಂಡಾಯ ಸ್ಫೋಟಗೊಂಡಿದೆ. ಕಾಂಗ್ರೆಸ್ ಮುಖಂಡರು ಗೌಪ್ಯವಾಗಿ ಸಭೆ ನಡೆಸಿ ವೆಂಕಟೇಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: Success Story | ಇವರು 100ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದಾರೆ; ಅಂತಿಮವಾಗಿ ಆಯ್ಕೆ ಆಗಿದ್ದು ಕರ್ನಾಟಕ ಫಾರೆಸ್ಟ್​ ಸರ್ವಿಸ್​ಗೆ!

ಶಾಸಕ ಪುತ್ರನಿಗೆ ಟಿಕೆಟ್ ಘೋಷಣೆಗೆ ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಗಾಯಿತ್ರಿ ಬಾಯಿ ತಮ್ಮ‌ ಬೆಂಬಲಿಗರೊಂದಿಗೆ ಸಭೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿರುವುದು ಬಹಿರಂಗವಾಗಿದೆ. ಮಾಜಿ ಶಾಸಕ ಸೋಮ್ಲಾನಾಯ್ಕ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

ಸೋಮ್ಲಾನಾಯ್ಕ ಸಹೋದರ ಪುತ್ರಿಯಾಗಿರುವ ಗಾಯಿತ್ರಿ ಬಾಯಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಸ್ವತಂತ್ರ ಅಭ್ಯರ್ಥಿ ಅಥವಾ ಇತರೆ ಪಕ್ಷದಿಂದ ಸ್ಪರ್ಧೆ ಮಾಡಲು ಚಿಂತನೆ ನಡೆಸಿದ್ದು ಬೆಂಬಲಿಗರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ. ಅಲ್ಲದೆ, ವೆಂಕಟೇಶ್​ಗೆ ಟಿಕೆಟ್ ನೀಡಬಾರದೆಂದು ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಮಗನಿಗೆ ಶಾಸಕ ವೆಂಕಟರಮಣಪ್ಪ ಟಿಕೆಟ್ ತ್ಯಾಗ ಮಾಡಿದ್ದರು. ವರಿಷ್ಠರಿಗೆ ಪಾವಗಡ ತಲೆಬಿಸಿ ಹೆಚ್ಚಿದೆ. ಇದನ್ನೂ ಓದಿ: ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net