ಅರವಿಂದ್ ಕೇಜ್ರಿವಾಲ್​ಗೆ ಎಚ್ಚರಿಕೆ ಸಂದೇಶ; 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದ ಪ್ರತಾಪ್ ಸಿಂಗ್ ಬಾಜ್ವಾ

Untitled design - 2023-09-26T161304.712
Published on

ಪಂಜಾಬ್: 32 ಆಮ್​ ಆದ್ಮಿ ಪಕ್ಷಕ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್‌ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಹೇಳಿಕೆ ನೀಡಿದ್ದು, ಈ ಮೂಲಕ ಅರವಿಂದ್​ ಕೇಜ್ರಿವಾಲ್​ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಹೊಂದಿದ್ದು, 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದ ಪ್ರತಾಪ್ ಸಿಂಗ್, ಎಎಪಿ ಶಾಸಕರ ಬೆಂಬಲದೊಂದಿಗೆ ತಮ್ಮ ಪಕ್ಷವು ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರವನ್ನು ಉರುಳಿಸಬಹುದು ಎಂಬುದನ್ನು ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಮತ ಹಾಕದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್, "ಪ್ರತಾಪ್ ಸಿಂಗ್ ಬಾಜ್ವಾ ಅವರೇ, ದೈರ್ಯವಿದ್ದರೆ ಹೈಕಮಾಂಡ್ ಜತೆ ಮಾತನಾಡಿ. ನೀವು ಪಂಜಾಬ್‌ನ ಚುನಾಯಿತ ಸರ್ಕಾರವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದೀರಿ. ಮುಖ್ಯಮಂತ್ರಿ ಆಗುವ ನಿಮ್ಮ ಆಸೆಯನ್ನು ಕಾಂಗ್ರೆಸ್ ನಾಶಗೊಳಿಸಿದೆ ಎಂಬ ಸಂಗತಿ ನನಗೆ ತಿಳಿದಿದೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net