ಕಾಂಗ್ರೆಸ್​ ಹೊಸ ಅಧ್ಯಕ್ಷರ ಆಯ್ಕೆಗೆ ಡಿಜಿಟಲ್ ಸ್ಪರ್ಶ !

sonia-rahul
Published on

ಡಿಜಿಟಲ್ ಐಡಿ ಕಾರ್ಡ್ ಹೀಗಿರಲಿದೆ.. ಎಐಸಿಸಿಐ ಮತದಾರನ ಹೆಸರು ಫೋಟೋ ಯಾವ ರಾಜ್ಯ ಘಟಕ ಹೊಣೆಗಾರಿಕೆ ಬಾರ್​ಕೋಡ್​ ಚುನಾವಣಾ ಸಮಿತಿಯಲ್ಲಿವವರು ಮಧುಸೂದನ್ ಮಿಸ್ತ್ರಿ (ಅಧ್ಯಕ್ಷರು) ಕೃಷ್ಣಬೈರೇ ಗೌಡ ಅರವಿಂದರ್ ಸಿಂಗ್ ಲವ್ಲೀ ರಾಜೇಶ್ ಮಿಶ್ರಾ ಜೋತಿಮಣಿ

ನವದೆಹಲಿ: ಸತತ ಸೋಲಿನ ಕಹಿ ಉಣ್ಣುತ್ತಲೇ ಇರುವ ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಈ ನಡುವೆ, ಹೊಸ ಅಧ್ಯಕ್ಷರ ಆಯ್ಕೆ ವಿಚಾರವೂ ಪದೇಪದೆ ಚರ್ಚೆಗೆ ಬರುತ್ತಿವೆ. ಹೊಸ ವಿಚಾರ ಅಂದರೆ ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆ ನಡೆಸುವುದಕ್ಕೆ ಡಿಜಿಟಲ್ ಸ್ಪರ್ಶ ನೀಡುವುದಕ್ಕೆ ಹೈಕಮಾಂಡ್ ತೀರ್ಮಾನಿಸಿದೆಯಂತೆ!

ಪಕ್ಷದ ಕೇಂದ್ರೀಯ ಚುನಾವಣಾ ತಂಡ 1,500ರಷ್ಟು ಎಐಸಿಸಿ ಪದಾಧಿಕಾರಿಗಳ ಮತದಾರರ ಯಾದಿಯನ್ನು ಸಿದ್ಧಪಡಿಸುತ್ತಿದೆ. ಅವರಿಗೆ ಡಿಜಿಟಲ್ ಐಡಿ ಕಾರ್ಡ್​ಗಳನ್ನು ಒದಗಿಸಲು ಕ್ರಮ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ಪಕ್ಷದ ಚುನಾವಣೆಗೆ ಡಿಜಿಟಲ್ ಸ್ಪರ್ಶ ನೀಡಲು ಹೈಕಮಾಂಡ್ ತೀರ್ಮಾನಿಸಿರುವಂಥದ್ದು. ಇದಕ್ಕಾಗಿ ರಾಜ್ಯ ಘಟಕಗಳಿಗೆ ಎಐಸಿಸಿ ಪದಾಧಿಕಾರಿಗಳ ಡಿಜಿಟಲ್ ಫೋಟೋ ಸಂಗ್ರಹಿಸಿ ಕಳುಹಿಸಲು ಸೂಚನೆ ನೀಡಲಾಗಿದೆ.

ಮುಂದಿನ ಕೆಲವೇ ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಿ ಆಯ್ಕೆ ಆದಾಗ 2017ರಲ್ಲಿ ಇದ್ದ ಎಐಸಿಸಿ ಪದಾಧಿಕಾರಿಗಳ ಪಟ್ಟಿಯನ್ನೇ ಈ ಚುನಾವಣೆಗೆ ಪರಿಗಣಿಸಲಾಗಿದೆ. ಒಮ್ಮೆ ಪಕ್ಷದ ಎಲೆಕ್ಟೋರಲ್ ಕಾಲೇಜ್​ ಚುನಾವಣೆ ಸಿದ್ಧವಾದ ಕೂಡಲೇ ಈ ಬಗ್ಗೆ ಅಧಿಸೂಚನೆ ಪ್ರಕಟಿಸಲಾಗುವುದು. ಪಂಚ ರಾಜ್ಯ ಚುನಾವಣೆಗೂ ಮೊದಲೇ ಪಕ್ಷದ ಈ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಅಧಿಕಾರಾವಧಿ 2 ವರ್ಷವಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net