ಕಾಂಗ್ರೆಸ್​ಗೆ ಅಧಿಕಾರದ ಚುಕ್ಕಾಣೆ ಹಿಡಿವ ತವಕ

klr dccb election,webp
Published on

ಕೋಲಾರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ನಡೆದಿದ್ದ ಚುನಾವಣೆ ಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷ, ಬಣಕ್ಕೂ ಬಹುಮತ ಬಂದಿಲ್ಲ.

ಒಟ್ಟು 18 ನಿರ್ದೇಶಕ ಸ್ಥಾನಗಳ ಪೈಕಿ 6 ಮಂದಿ ಅವಿರೋಧ ಆಯ್ಕೆಯಾಗಿದ್ದು, 12 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 8 ಕ್ಷೇತ್ರಗಳ ಲಿತಾಂಶ ಪ್ರಕಟಗೊಂಡಿದ್ದು, ಇನ್ನೂ 4 ಕ್ಷೇತ್ರಗಳ ಫಲಿತಾಂಶವನ್ನು ನ್ಯಾಯಾಲಯದ ಆದೇಶದಂತೆ ಕಾಯ್ದಿರಿಸಲಾಗಿದೆ.

ಸಾಮಾನ್ಯ ಚುನಾವಣೆಗಳನ್ನೂ ನಾಚಿಸುವ ರೀತಿ ಡಿಸಿಸಿ ಬ್ಯಾಂಕ್​ ಚುನಾವಣೆ ನಡೆದಿದ್ದು, ಒಂದೆರದು ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದರೆ, ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಬೆಂಬಲಿತ ಅಭ್ಯರ್ಥಿಗಳಿಗೆ ಸ್ವ ಪಕ್ಷದವರೇ ಎದುರಾಳಿಗಳಾಗಿದ್ದರು. ಚುನಾವಣೆಯು ಆಡಳಿತ ಪಕ್ಷಕ್ಕೆ ಪ್ರತಿಷ್ಠೆಯಾಗಿತ್ತಾದರೂ ನಿರೀತ ಮಟ್ಟದಲ್ಲಿ ಲಿತಾಂಶ ಲಭಿಸದಿರುವುದು ಬೇಸರವುಂಟು ಮಾಡಿದೆ. ಅಲ್ಲದೆ ಚುನಾವಣೆಯಲ್ಲಿ ಯಾರಿಗೂ ಬಹುಮತ ದೊರೆತಿಲ್ಲ. ಬಣಗಳಲ್ಲಿ ಗುರುತಿಸಿಕೊಂಡಿದ್ದವರು ಹೆಚ್ಚು ಮಂದಿ ಗೆದ್ದಿದ್ದು, ಅಧ್ಯಕ್ಷ&ಉಪಾಧ್ಯಕ್ಷ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

* ಕಾಂಗ್ರೆಸ್​ ಬಣ ಸೃಷ್ಟಿಸಿದ ಎಲೆಕ್ಷನ್​

ಡಿಸಿಸಿ ಬ್ಯಾಂಕ್​ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸೇರಿ ಮಾಜಿ ನಿರ್ದೇಶಕರು, ಹೊಸ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದರು. ಅದರಲ್ಲೂ ಈ ಬಾರಿ ಮೂವರು ಶಾಸಕರು ಅವಿರೋಧ ಆಯ್ಕೆಯಾಗಿರುವುದು ವಿಶೇಷವಾಗಿದೆ. ಕಣದಲ್ಲಿದ್ದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಾಸಕರು ಭಾರಿ ಕಸರತ್ತು ನಡೆಸಿದ್ದರಾದರೂ ಲಿಸಿಲ್ಲ. ಕಾಂಗ್ರೆಸ್​ನ ಎರಡು ಗುಂಪುಗಳಿಗೆ ವೇದಿಕೆಯಾಗಿದ್ದ ಚುನಾವಣೆಯಲ್ಲಿ ಸ್ವ ಪಕ್ಷದ ಶಾಸಕರ ನಡುವೆಯೇ ಆರೋಪ&ಪ್ರತ್ಯಾರೋಪ ಜೋರಾಗಿತ್ತು. ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರನ್ನು ಸೋಲಿಸಬೇಕು ಎಂದು ಪಣ ತೊಟ್ಟಿದ್ದವರಿಗೆ ಲಿತಾಂಶ ಆಘಾತ ನೀಡಿದೆ.

* 4 ಅಭ್ಯರ್ಥಿಗಳ ಲಿತಾಂಶಕ್ಕೆ ತಡೆ

ಬ್ಯಾಂಕ್​ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದನ್ನು ಪ್ರಶ್ನಿಸಿ ಕೆಲವರು ಕೋರ್ಟ್​ ಮೊರೆ ಹೋಗಿದ್ದ ಕಾರಣ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​. 4 ಕ್ಷೇತ್ರಗಳ ಫಲಿತಾಂಶ ಕಾಯ್ದಿರಿಸಿದ್ದಾರೆ. ಕೋಲಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರ 1, ಚಿಕ್ಕಬಳ್ಳಾಪುರ ಎಂಪಿಸಿಎಸ್​ 1 ಹಾಗೂ ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಇತರ ಸಹಕಾರ ಸಂಘ ಕ್ಷೇತ್ರ 2 ಮತ ಹಕ್ಕು (ಡೆಲಿಗೇಟ್​) ಪಡೆದುಕೊಂಡಿರುವ ಸಂಘಗಳ ಚುನಾವಣೆಯನ್ನು ಬೈಲಾ ಪ್ರಕಾರ ನಡೆಸಿಲ್ಲ. ಆದರೂ ಮತ ಹಕ್ಕು ಪಡೆದುಕೊಂಡಿರುವುದು ಅನಧಿಕೃತ ಎಂದು ಪ್ರಶ್ನಿಸಿ ಕೆಲವರು ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಅಂತಿಮ ತೀರ್ಪು ಪ್ರಕಟಗೊಳ್ಳುವ ತನಕ ಲಿತಾಂಶ ಕಾಯ್ದಿರಿಸಲಾಗಿದೆ.

* ಜನಪ್ರತಿನಿಧಿಗಳಿಗೆ ಪ್ರತಿಷ್ಠೆ

ಡಿಸಿಸಿ ಬ್ಯಾಂಕ್​ ಚುನಾವಣೆ ಕಣದಲ್ಲಿ ಉಳಿದಿದ್ದ ಅಭಭ್ಯರ್ಥಿಗಳಿಗಿಂತ, ಜನಪ್ರತಿನಿಧಿಗಳಿಗೆ ಬಹಳ ಪ್ರತಿಷ್ಠೆಯಾಗಿತ್ತು. ಪಕ್ಷದ ಬೆಂಬಲಿತರನ್ನು ಗೆಲ್ಲಿಸಿಕೊಳ್ಳಲು ಹಗಲು&ರಾತ್ರಿ ಶ್ರಮಿಸಿದ್ದು, 4 ಕ್ಷೇತ್ರಗಳ ಫಲಿತಾಂಶಕ್ಕೆ ತಡೆ ಸಿಕ್ಕಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. 18 ನಿರ್ದೇಶಕರ ಪೈಕಿ ಗುಡಿಬಂಡೆ, ಮಚ್ಚೇನಹಳ್ಳಿ ಬಿಜೆಪಿ, ಮುಳಬಾಗಿಲು ಜೆಡಿಎಸ್​, ಗೌರಿನಿದನೂರು ಪಕ್ಷೇತರ, ಕೋಲಾರ ಎಂಪಿಸಿಎಸ್​, ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು, ಕೆಜಿಎ್​, ಕೋಲಾರ ಟಿಎಪಿಸಿಎಂ, ಬಾಗೇಪಲ್ಲಿ, ಚೇಳೂರು ಕಾಂಗ್ರೆಸ್​ ಬೆಂಬಲಿತರು ಆಯ್ಕೆಯಾಗಿದ್ದಾರೆ. ಫಲಿತಾಂಶ ತಡೆಯಿರುವ 4 ಕ್ಷೇತ್ರಗಳ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲ್ಲುವ ನಿರೀೆಯಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ.

ಮಾಜಿ ಅಧ್ಯಕ್ಷ ಗೋವಿಂದಗೌಡ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಜತೆಗೆ ಬೆಂಬಲಿಗರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇದರ ನಡುವೆ ಕೆಜಿಎ್​ ಶಾಸಕಿ ರೂಪಕಲಾ, ಬಂಗಾರಪೇಟೆ ನಿರ್ದೇಶಕ ರಂಗನಾಥಾಚಾರಿ, ಗೌರಿಬಿದನೂರು ವೆಂಕಟರಾಮರೆಡ್ಡಿ ಅಧ್ಯಕ್ಷ&ಉಪಾಧ್ಯಕ್ಷ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

* ಅವಿರೋಧ ಆಯ್ಕೆ

ಬ್ಯಾಂಕ್​ ಚುನಾವಣೆಗೆ ಸ್ಪರ್ಧಿಸಿದ್ದವರ ಪೈಕಿ ಟಿಎಪಿಸಿಎಂಎಸ್​ ಕ್ಷೇತ್ರದಿಂದ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್​, ಕೃಷಿ ಪತ್ತಿನ ಸಹಕಾರ ಸಂಗಳ ಕ್ಷೇತ್ರದಿಂದ ಬಾಗೇಪಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ, ಕೆಜಿಎ್​ ಶಾಸಕಿ ಎಂ.ರೂಪಕಲಾ, ಮಾಜಿ ಉಪಾಧ್ಯಕ್ಷ ಶಿಡ್ಲಟ್ಟ ನಾಗರಾಜ್​, ಮಂಚೇನಹಳ್ಳಿ ಹನುಮೇಗೌಡ, ಮಾಲೂರು ಡಿ.ಎನ್​.ರಮೇಶ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜೇತರ ವಿವರ (ಪಡೆದ ಮತ )

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರ.

ಬಂಗಾರಪೇಟೆ

ಕೆ.ಎಸ್​.ರಂಗನಾಥಾಚಾರಿ 8

ವಿ.ಮಾಕೋರ್ಂಡೇಗೌಡ 4

ಮುಳಬಾಗಿಲು

ಆರ್​.ಅಮರನಾರಾಯಣಪ್ಪ 0

ವಿ.ರಘುಪತಿರೆಡ್ಡಿ 10

ಎಂ.ಸಿ.ಸರ್ವಜ್ಞಗೌಡ 9

ಶ್ರೀನಿವಾಸಪುರ

ಎ.ಸಿ.ನಾಗರತ್ನಮ್ಮ 3

ಬಿ.ಎನ್​.ಶಶಿಕುಮಾರ್​ 0

ಬಿ.ವಿ.ಸುರೇಶ್​ರೆಡ್ಡಿ 2

ಗುಡಿಬಂಡೆ

ಕೆ.ಜೆ.ಆನಂದರೆಡ್ಡಿ 3

ಎಚ್​.ಎನ್​.ಮಂಜುನಾಥರೆಡ್ಡಿ 5

ಗೌರಿಬಿದನೂರು

ಕೆ.ಎನ್​.ವೆಂಕಟರಾಮರೆಡ್ಡಿ

ಹನುಮಂತರೆಡ್ಡಿ 17

ಚೋಳೂರು

ಕೆ.ವಿ.ಭಾಸ್ಕರರೆಡ್ಡಿ 5

ಪಿ.ಎನ್​.ಮಂಜುನಾಥರೆಡ್ಡಿ 4

ಬಿ.ಶೇಖರ್​ 00

ಹಾಲು ಒಕ್ಕೂಟದ ಸಹಕಾರ ಸಂಗಳ ಕ್ಷೇತ್ರ

ಕೋಲಾರ

ಎಚ್​.ವಿ.ವಿನೋದ್​ಕುಮಾರ್​ 65

ಕೆ.ಶಿವಾನಂದ 59

ಡಿಸಿಸಿ ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಇತರ ಸಹಕಾರ ಸಂಘ ಕ್ಷೇತ್ರ

ಬ್ಯಾಲಹಳ್ಳಿ ಎಂ.ಗೋವಿಂದ ಗೌಡ 29

ಬಿ.ಆರ್​.ಶ್ರೀನಿವಾಸ್​ 17

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net