ಬಾಗಲಕೋಟೆಯಲ್ಲಿ ಹೊಸವರ್ಷಕ್ಕೆ ಸಖತ್​ ಸ್ಟೆಪ್​​ ಹಾಕಿದ ಕಾಂಗ್ರೆಸ್​ ಜಿಲ್ಲಾಧ್ಯಕ್ಷರು..!

dance
Published on

ಬಾಗಲಕೋಟೆ: ದೇಶಾದ್ಯಂತ ಹೊಸ ವರ್ಷವನ್ನು ಜನರು ಸಂಭ್ರಮದಿಂದ ಬರಮಾಡಿಕೊಂಡಿದ್ದು ನೃತ್ಯ, ಸಂಗೀತ, ಮದ್ಯಪಾನಗಳ ಮೂಲಕ ತಮ್ಮನ್ನು ತಾವು ಸಂತೋಷಗೊಳಿಸಿದ್ದಾರೆ. ಬೆಂಗಳೂರಿನಲ್ಲೂ ಪೊಲೀಸ್​ರ ಕಣ್ಗಾವಲಿನಲ್ಲಿ ಅದ್ಧೂರಿಯಾಗಿ ಹೊಸ ವರ್ಷದ ಸಂಭ್ರಮಾಚರಣೆ ನಡೆದಿದೆ.

ಅದೇ ರೀತಿ ಬಾಗಲಕೋಟೆಯಲ್ಲೂ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು ಹಾಡು ಹಾಡುತ್ತಾ ಸಖತ್ ಆಗಿ ಸ್ಟೆಪ್​ ಹಾಕಿ ಸಂಭ್ರಮಿಸಿದ್ದಾರೆ. ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಹಾಡು ಹಾಗೂ ನೃತ್ಯಗಳ ಮೂಲಕ ಸಂಭ್ರಮದ ಕ್ಷಣಗಳನ್ನು ಸವಿದಿದ್ದಾರೆ. ಇವರು 70ರ ಹರೆಯದಲ್ಲೂ ಯುವಕರನ್ನು ನಾಚಿಸುವಂತೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.

ವೇದಿಕೆಯ ಮೇಲೆ ಹಾಡು ಹಾಡಿ, ಜನರ ಮಧ್ಯೆ ಎಲ್ಲರೂ ನಾಚುವಂತೆ ಭರ್ಜರಿ ಸ್ಟೆಪ್ ಹಾಕಿ ಹುಬ್ಬೇರಿಸಿದ್ದಾರೆ. ಈ ಸಂದರ್ಭ ವೇದಿಕೆ ಏರಿದ ಹಿರಿಯರು ವಯಸ್ಸಿನ ಭೇದ ಮರೆತು ಕುಣಿದು ಕುಪ್ಪಳಿಸಿದ್ದಾರೆ. ಜಿಲ್ಲಾಧ್ಯಕ್ಷರು, ಖಾಸಗಿಯಾಗಿ ಆಯೋಜನೆಯಾಗಿದ್ದ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಹಾಡು ನೃತ್ಯದಲ್ಲಿ ಭಾಗಿ ಆಗಿದ್ದರು.

ಖಾಸಗಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಹಿಂದಿ ಹಾಡುಗಳನ್ನು ಹಾಡಿದ ಎಸ್.ಜಿ.ನಂಜಯ್ಯನಮಠ ನೆರೆದವರ ಮನ ರಂಜಿಸಿದರು. ಇವರು ಮಾಜಿ ಶಾಸಕರೂ ಆಗಿದ್ದರು ಎನ್ನುವುದು ವಿಶೇಷ ಸಂಗತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net