ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿ ಜೆಡಿಎಸ್ ಶಕ್ತಿ ಕುಗ್ಗಿಸಲು ಆಗುವುದಿಲ್ಲ|Congress convention in Hassan will not weaken the power of the JDS

SureshBabu1
Published on

ಬೆಂಗಳೂರು: ಕಾಂಗ್ರೆಸ್ ಹಾಸನದಲ್ಲಿ ಸಮಾವೇಶ ಮಾಡಿ ಜೆಡಿಎಸ್ ಶಕ್ತಿ ಕುಗ್ಗಿಸಲು ಆಗುವುದಿಲ್ಲ (Congress convention in Hassan will not weaken the power of the JDS)ಎಂದು ವಿಧಾನಸಭೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು(Suresh Babu) ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಷ್ಟೇ ಜನ ಸೇರಿಸಿ, ಏನೇ ಸಮಾವೇಶ ಮಾಡಿದರೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ(Kumaraswamy), ರೇವಣ್ಣ(Revanna) ಶಕ್ತಿ ಕುಂದಿಸಲು ಆಗುವುದಿಲ್ಲ ಎಂದರು.

ಸಿಎಂ ಬದಲಾವಣೆ ಮಾಡುವ ಭಯದಿಂದ ಈ ರೀತಿಯ ಸಮಾವೇಶ ಮಾಡುತ್ತಿದ್ದಂತೆ ಕಾಣುತ್ತಿದೆ. ಕಾಂಗ್ರೆಸ್ ಹೊರಟಿರುವ ಹಾದಿ ನೋಡಿದರೆ ಆಂತರಿಕ ಸಮಸ್ಯೆಗೆಗಳಿಂದ ಪಕ್ಷ ಬಳಲುತ್ತಿದೆ. ಇದನ್ನು ಮುಚ್ಚಿಕೊಳ್ಳಲು ಸಮಾವೇಶದ ನಾಟಕ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್ ಕಾರ್ಯಕರ್ತರು ತಳಮಟ್ಟದವರು ಇದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಗ್ಯಾರಂಟಿ ಪರ ಕಾರ್ಯಕರ್ತರು ಇದ್ದಾರೆ. ನಮ್ಮ ಕಾರ್ಯಕರ್ತರು ಪಕ್ಷದಿಂದ ವಿಚಲಿತರಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲ. ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಆಗಲ್ಲ ಎಂದು ಅವರವರೇ ಮಾತನಾಡಿಕೊಳ್ಳುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಈ ಸಮಾವೇಶ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು.

ಎಲ್ಲ ವರ್ಗದ ಜನರ ಹಣವನ್ನೂ ಸರ್ಕಾರ ಬಳಸಿಕೊಳ್ಳುತ್ತಿದೆ. ಸರ್ಕಾರದ ಹಣದಲ್ಲೇ ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬುದು ನಮ್ಮ ಭಾವನೆ. ಜನರ ತೆರಿಗೆ ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅನುಮಾನ ನಮಗಿದೆ. ಜನರ ತೆರಿಗೆ ಹಣಕ್ಕೆ ಅಕೌಂಟಬಲಿಟಿ ಇರಬೇಕು.

ತೆರಿಗೆ ಹಣದಲ್ಲಿ ಪಕ್ಷದ ಕಾರ್ಯಕ್ರಮ ಮಾಡುವ ಹಾಗಿಲ್ಲ. ಪಕ್ಷದ ಕಾರ್ಯಕ್ರಮಗಳಿಗೆ ಜನರ ತೆರಿಗೆ ಹಣ ಬಳಸಿ ಕೊಳ್ಳಬಾರದು ಎಂದು ಸುರೇಶ್ ಬಾಬು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net