

ಬೆಂಗಳೂರು: ಇದೀಗ ಕಾಂಗ್ರೆಸ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯೂ ಬಿಡುಗಡೆ ಆಗಿದ್ದು ಈ ಬಾರಿಯೂ ಭಾರಿ ಜಾತಿ ಲೆಕ್ಕಾಚಾರ ಮಾಡಿದೆ. ಲಿಂಗಾಯತ ಸಮುದಾಯಕ್ಕೆ ಎರಡನೇ ಪಟ್ಟಿಯಲ್ಲಿ ಅತ್ಯಧಿಕ ಸ್ಥಾನಗಳನ್ನು ನೀಡಲಾಗಿದ್ದು ಒಕ್ಕಲಿಗ ಅಭ್ಯರ್ಥಿಗಳ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಈ ಸಂದರ್ಭ ಲಿಂಗಾಯತ ಸಮುದಾಯ ಕಾಂಗ್ರೆಸ್ ಮೇಲೆ ಕೆಂಗಣ್ಣು ತೋರಿಸಿದ್ದು ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ನಡೆಗೆ ಲಿಂಗಾಯತ ಸಮುದಾಯ ಗರಂ!
ಇನ್ನು, ಕುರುಬ, ಎಸ್‌ಸಿ, ಮುಸ್ಲಿಂ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಲಾಗಿದ್ದು ರಜಪೂತ, ಮರಾಠಿ, ಈಡಿಗ, ರೆಡ್ಡಿ ಮುಂತಾದ ಜಾತಿಯಿಂದ ತಲಾ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.
ಇನ್ನೂ 58 ಕ್ಷೇತ್ರಗಳಲ್ಲಿ ಗೊಂದಲ ಮುಂದುವರೆದಿದೆ. ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇರುವುದರಿಂದ ಈ ಬಾರಿಯೂ ಬಾಕಿ ಉಳಿಸಿಕೊಳ್ಳಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆಗೆ ಬಯಸಿದ್ದು, ಅದರ ಕುತೂಹಲವೂ ಹಾಗೇ ಇದೆ.
ಲಿಂಗಾಯತ - 11
ಒಕ್ಕಲಿಗ - 10
ಕುರುಬ - 3
ಎಸ್‌ಸಿ - 4
ಮುಸ್ಲಿಂ - 3
ಈಡಿಗ - 1
ಮೊಗವೀರ - 2
ರಜಪೂತ - 1
ಮರಾಠಿ - 1
ಎಸ್.ಟಿ - 2
ರೆಡ್ಡಿ - 1
ನಾಯ್ಡು - 1