ಮಹಾಂತೇಶ ಕೆ.ಲಂಬಿ ಅವರಿಗೆ ಅಭಿನಂದನೆ

sanmana
ಸೊರಬ ಇನ್‌ಸ್ಪೆಕ್ಟರ್ ಮಹಾಂತೇಶ ಕೆ.ಲಂಬಿ ಅವರನ್ನು ಬಿ.ವರಲಕ್ಷ್ಮೀ ಪ್ರಕಾಶ್ ಅಭಿನಂದಿಸಿದರು. ಡಿ.ಮಲ್ಲೇಶಪ್ಪ, ಪರಮೇಶ್ವರಪ್ಪ, ಎಚ್.ರುದ್ರಪ್ಪ, ಅರುಣ್, ಸೈಯ್ಯದ್ ಅಲಿ ಇದ್ದರು.
Published on

ಶಿವಮೊಗ್ಗ: ಸೊರಬ ತಾಲೂಕು ಕಡಸೂರು ಗ್ರಾಮದ ಮಾರಿಕಾಂಬ ದೇವಾಲಯದ ಕಳವು ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿರುವ ಸೊರಬ ಪೊಲೀಸರ ಪರವಾಗಿ ಇನ್‌ಸ್ಪೆಕ್ಟರ್ ಮಹಾಂತೇಶ ಕೆ.ಲಂಬಿ ಅವರನ್ನು ಧಾರ್ಮಿಕ ದತ್ತಿ ಮತ್ತು ಧರ್ಮದಾಯ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ.ವರಲಕ್ಷ್ಮೀ ಪ್ರಕಾಶ್ ಅಭಿನಂದಿಸಿದರು.

ಕಡಸೂರು ಪ್ರಕರಣದ ಜತೆಗೆ ಹಲವು ದೇವಾಲಯಗಳಲ್ಲಿ ಕಳ್ಳತನ ಮಾಡಿರುವ ವಸ್ತುಗಳನ್ನು ಸೊರಬ ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರಲಕ್ಷ್ಮೀ ತಿಳಿಸಿದರು.

ದೇವಸ್ಥಾನಗಳನ್ನೇ ಗುರಿಯಾಗಿಸಿ ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರು ಮತ್ತು ಜನರ ನಡುವೆ ವಿಶ್ವಾಸ, ಸುರಕ್ಷೆ ಮತ್ತು ನೇರ ಸಂಪರ್ಕ ಹೆಚ್ಚಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮನೆ ಮನೆಗೆ ಪೊಲೀಸ್ ಯೋಜನೆ ಕೂಡ ಕಳ್ಳತನ ಪ್ರಕರಣಗಳ ತ್ವರಿತ ಪತ್ತೆಗೆ ಅನುಕೂಲವಾಗಲಿದೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಬಂಧ ಸೇತು ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ, ಜಿಲ್ಲಾ ಅಟ್ರಾಸಿಟಿ ಸಮಿತಿ ಸದಸ್ಯ ಎಚ್.ರುದ್ರಪ್ಪ , ಪ್ರಮುಖರಾದ ಪರಮೇಶ್ವರಪ್ಪ, ಸೈಯ್ಯದ್ ಅಲಿ, ಅರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net