ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂದೇಶ ಹಂಚಿದ್ದಕ್ಕೆ ಪೊಲೀಸರು ಕರೆ ತಂದರಾ ?

Ravikumar 12 Feb 20
Published on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಸರ್ಕಾರ ಹೆದರಿಸಿ, ಕಿರುಕುಳ ನೀಡುತ್ತಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.

ಉನ್ನತ ಪೊಲೀಸ್ ಅಧಿಕಾರಿಗೆ ಶುಕ್ರವಾರ ಭೇಟಿಯಾದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಂಡ್ಯದಲ್ಲಿ ಗುರುವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಾಸನದಲ್ಲಿ ನಾಲ್ಕು ಜನ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರಿನಲ್ಲಿ ಕಾರ್ಯಕರ್ತೆ ಶಕುಂತಳಾ ಅವರನ್ನು ವಶಕ್ಕೆ ಪಡೆದು, ಅವರನ್ನು 10 ರಿಂದ 15 ತಾಸುಗಳ ವಿಚಾರ ನಡೆಸಿ ಬಿಟ್ಟಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಲಂಚಗುಳಿತನ, ವೈಲ್ಯ ಪ್ರಶ್ನಿಸುವ, ಟೀಕಿಸುವ ಅಭಿವ್ಯಕ್ತಿ ಎಲ್ಲರಿಗೂ ಇದೆ ಎಂದರು.

ಆದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪಕ್ಷದ ಕಾರ್ಯಕರ್ತರ ಮನೆಗೆ ಹೋಗಿ ಕರೆದೊಯ್ಯುವುದು, ಅರೆಸ್ಟ್ ಮಾಡಿಲ್ಲ ಎನ್ನುವುದು ನಡೆದಿದೆ. ಮಾಹಿತಿ ಪಡೆಯುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಲಾಗಿದೆ ಎಂದು ಆಪಾದನೆ ಮಾಡುತ್ತಿದ್ದು, ಇವುಗಳ ಬಗ್ಗೆ ತನಿಖೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಕಾರ್ಯಕರ್ತರಿಗೆ ಬೆದರಿಕೆ ಹಾಕಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಸರಿಯಲ್ಲವೆಂದು ಆಕ್ಷೇಪಿಸಿದರು.

ಈ ವಿಷಯದ ಬಗ್ಗೆ ಪೊಲೀಸ್ ಕಮಿಷನ್ ಬಳಿ ಚರ್ಚೆಗೆಂದು ಬಂದಿದ್ದೆವು. ಆದರೆ ಕ್ರೈಮ್ ಡಿಸಿಪಿ ಬದ್ರಿನಾಥ್ ಅವರನ್ನು ಭೇಟಿಯಾಗಿದ್ದೇವೆ. ಮಾಹಿತಿ ಪಡೆದು ಬಿಟ್ಟು ಕಳಿಸಿದ್ದೇವೆ ಎಂದು ತಿಳಿಸಿದ್ದು, ಏನೇ ಇದ್ದರೂ ನಮ್ಮನ್ನು ಸಂಪರ್ಕಿಸಿ ಎಂದಿದ್ದೇವೆ.

ಕಾರ್ಯಕರ್ತರನ್ನು ಹೆದರಿಸಬೇಡಿ ಎಂದು ಕೋರಿದ್ದೇವೆ. ಬೆಂಗಳೂರಿನಲ್ಲಿ ಯಾರನ್ನೂ ಬಂಧಿಸಿಲ್ಲ ಎಂದು ಎನ್.ರವಿಕುಮಾರ್ ಸ್ಪಷ್ಟಪಡಿಸಿ, ಬಿಬಿಎಂಪಿ ಕಚೇರಿ ಅಗ್ನಿಅವಘಡದ ತನಿಖೆ ನಡೆಸಿ ಯಾರೇ ತಪ್ಪು ಮಾಡಿದ್ದರೂ ಅವರನ್ನು ಜೈಲಿಗೆ ಕಳುಹಿಸಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net