ಮುಟ್ಟಾದಾಗ ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ! ಪತಿಗೆ ವಿಚ್ಛೇದನ ಕೊಟ್ಟ ಮಹಿಳೆ..Menstrual Taboo

Menstrual Card
Published on

ಭೋಪಾಲ್​: (Menstrual Taboo) ಮುಟ್ಟಾದ ಸಮಯದಲ್ಲಿ ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಇದೆಲ್ಲದರಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಘಟನೆ  ಭೋಪಾಲ್​ನಲ್ಲಿ ನಡೆದಿದೆ.

ನಡೆದಿದ್ದೇನು?: 

ಇಬ್ಬರೂ 30 ವರ್ಷ ಆಸುಪಾಸಿನವರಾಗಿದ್ದು, 2 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಆತ ಒಬ್ಬ ಸಂಪ್ರದಾಯಸ್ಥ ಕುಟುಂಬದಿಂದ ಬಂದವನಾಗಿದ್ದ,   ಆಕೆಯ ಅತ್ತೆ-ಮಾವಂದಿರುವ ಹಳೆಯ ಪದ್ಧತಿ, ಸಂಪ್ರದಾಯಗಳನ್ನೇ ನಂಬಿದ್ದರು.

ಮದುವೆಯಾಗಿ ಹೊಸತರಲ್ಲಿ, ಮುಟ್ಟಾದ ಸಮಯದಲ್ಲಿ ಏಳು ದಿನಗಳವರೆಗೆ ಅಡುಗೆ ಮನೆ ಅಥವಾ ಪೂಜಾ ಸ್ಥಳಕ್ಕೆ ಬಾರದಂತೆ ನಿಷೇಧಿಸಲಾಗಿತ್ತು. ಮನೆಯಿಂದ ಹೊರಹೋಗಬಾರದು, ಒಂದು ಕೋಣೆಯಲ್ಲಿಯೇ ಇರಬೇಕು, ಸ್ನಾನವನ್ನು ಕೂಡ ಮಾಡಬಾರದು ಎಂದು ಹೇಳಿದಾಗ ಆಕೆಗೆ ಆಘಾತವಾಗಿತ್ತು.  ಬಳಿಕ ಆಕೆ ತನ್ನ ಗಂಡನ ಮನೆ ತೊರೆದು ಹೆತ್ತವರ ಮನೆಗೆ ಬಂದಿದ್ದಳು.

ಪತಿ ಕೂಡ ತಾಯಿ ಹೇಳಿರುವ ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಆಕೆ ಬೇಸರಗೊಂಡಿದ್ದಳು, ಪತಿ ಬಳಿ ಹಲವು ಬಾರಿ ತಾಯಿಗೆ ಬುದ್ಧಿವಾದ ಹೇಳುವಂತೆ ಕೇಳಿಕೊಂಡರೂ ಏನು ಪ್ರಯೋಜನವಾಗಿರಲಿಲ್ಲ ಹಾಗಾಗಿ ಆಕೆ ಗಂಡನಿಂದ ಬೇರ್ಪಡುವುದೇ ಒಳ್ಳೆಯದು ಎಂದು ನಿರ್ಧರಿಸಿ ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net