ಪಾಕ್​ ಡಂಪ್​ ಟ್ರಕ್​, ಭಾರತ ಮರ್ಸಿಡಿಸ್ ಎಂಬ ಮುನೀರ್​ ಹೇಳಿಕೆ; ಇದು ತಪ್ಪೊಪ್ಪಿಗೆ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ! | Rajnath Singh

Rajnath Singh
Published on

Rajnath Singh: ಭಾರತವನ್ನು ಐಷಾರಾಮಿ ಕಾರಿಗೆ ಮತ್ತು ತನ್ನ ಸ್ವಂತ ದೇಶ ಪಾಕಿಸ್ತಾನವನ್ನು ಡಂಪ್ ಟ್ರಕ್‌ನೊಂದಿಗೆ ಹೋಲಿಸಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್​​ನ ವಿಲಕ್ಷಣ ಪ್ರಯತ್ನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಅಪಹಾಸ್ಯ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವ ಸಿಂಗ್​, ಎರಡು ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯಗಳಿಸಿದ್ದು, ಒಂದು ದೇಶ ಕಠಿಣ ಪರಿಶ್ರಮ, ಉತ್ತಮ ನೀತಿಗಳು ಮತ್ತು ದೂರದೃಷ್ಟಿಯ ಮೂಲಕ ಫೆರಾರಿಯಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶವು ಇನ್ನೂ ಡಂಪರ್ ಸ್ಥಿತಿಯಲ್ಲಿದೆ. ಈ ಹೇಳಿಕೆಯನ್ನು ತಪ್ಪೊಪ್ಪಿಗೆಯಾಗಿ ನೋಡುತ್ತೇನೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಮುನೀರ್ ಅವರ ಹೋಲಿಕೆಯು ಪಾಕಿಸ್ತಾನದ ಮನಸ್ಥಿತಿಯೊಂದಿಗಿನ ಆಳವಾದ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದಿರುವ ರಕ್ಷಣಾ ಸಚಿವರು, ಪಾಕಿಸ್ತಾನ ಸೇನಾ ಮುಖ್ಯಸ್ಥರು, ತಿಳಿದೋ ಅಥವಾ ತಿಳಿಯದೆಯೋ, ದರೋಡೆಕೋರ ಮನಸ್ಥಿತಿಯ ಕಡೆಗೆ ಬೆರಳು ತೋರಿಸಿದ್ದಾರೆ, ಪಾಕಿಸ್ತಾನವು ಹುಟ್ಟಿನಿಂದಲೂ ಅದಕ್ಕೆ ಬಲಿಯಾಗಿದ್ದು, ನಾವು ಪಾಕಿಸ್ತಾನ ಸೇನೆಯ ಈ ಭ್ರಮೆಯನ್ನು ಮುರಿಯಬೇಕು ಎಂದರು.

ಮುನೀರ್ ಮಾತೇನು..?

ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮುನೀರ್, ಭಾರತವು ಫೆರಾರಿಯಂತಹ ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್ ಹೊಳೆಯುತ್ತಿದೆ, ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ, ಯಾರು ಸೋಲುತ್ತಾರೆ?" ಎಂದು ಅವರು ಕೇಳಿದರು, ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟ್ರೋಲ್​​ಗೆ ಕಾರಣವಾಯಿತು. ಮುನೀರ್​​ ಮಾತುಗಳು ಪಾಕಿಸ್ತಾನವನ್ನು ಕೆಟ್ಟದಾಗಿ ಕಾಣುವಂತೆ ಮಾಡಿದ್ದು, ಭಾರತದ ಪ್ರಗತಿ ಪಾಕಿಸ್ತಾನಕ್ಕಿಂತ ಮುಂದಿದೆ ಎನ್ನುವುದನ್ನು ಒಪ್ಪಿಕೊಂಡಂತೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಂಗ್ಯವಾಡುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net