

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಲಿತಾಂಶವನ್ನು ಹೆಚ್ಚಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರವು ಹಮ್ಮಿಕೊಂಡಿರುವ ಪುನಶ್ಚೇತನ ಮತ್ತು ಪರೀಕ್ಷಾ ತಯಾರಿ ತರಬೇತಿ ಕಾರ್ಯಕ್ರಮವನ್ನು ಕೇವಲ ಸರ್ಕಾರಿ ಕಾಲೇಜುಗಳ ಉಪನ್ಯಾಸಕರಿಗೆ ಮಾತ್ರ ಆಯೋಜಿಸದೆ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿಗೂ ಆಯೋಜಿಸುವಂತೆ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಪಿಯು ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಲಿತಾಂಶ ಎಂದಾಕ್ಷಣ ಕೇವಲ ಸರ್ಕಾರಿ ಪಿಯು ಕಾಲೇಜುಗಳ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳನ್ನು ಕೂಡ ಒಳಗೊಂಡಿದೆ. ಈ ಕಾರಣದಿಂದ ತಾರತಮ್ಯ ಮಾಡದೆ, ತರಬೇತಿ ಕಾರ್ಯಕ್ರಮವನ್ನು ಎಲ್ಲ ಸಂಸ್ಥೆಗಳಿಗೂ ಹಮ್ಮಿಕೊಳ್ಳಬೇಕು.
ಎಲ್ಲ ವಿಷಯಗಳ ಉಪನ್ಯಾಸಕರನ್ನು ಒಳಗೊಂಡಂತೆ ಹಮ್ಮಿಕೊಂಡರೆ, ಉತ್ತಮ ಲಿತಾಂಶ ಸಾಧಿಸಲು ಸಾಧ್ಯವಾಗಲಿದೆ. ಹೀಗಾಗಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.