

ಕೋಲಾರ: ಒಳ ಮೀಸಲಾತಿ ಜಾತಿ ಸಮೀೆಯು ಜಿಲ್ಲೆಯಲ್ಲಿ ಚುರುಕು ಪಡೆದಿದ್ದು, ಮಂಗಳವಾರ ಪರಿಶಿಷ್ಟ ಜಾತಿ ಸಮೀಕ್ಷೆಯ ಸಮನ್ವಯ ಸಮಿತಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ ಜಿಲ್ಲೆಗೆ ಭೇಟಿ ನೀಡಿ, ಗಣತಿ ಪರಿಶೀಲಿಸಿದರು.
ನಗರದ ಅಂಬೇಡ್ಕರ್ ನಗರ, ಗಾಂಧಿನಗರ, ಟಮಕ, ಗದ್ದೆಕಣ್ಣೂರು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ಸಮೀಕ್ಷೆ ನಡೆಸುತ್ತಿರುವ ಸಿಬ್ಬಂದಿ ಜತೆಯೇ ಮನೆ ಮನೆಗೆ ತೆರಳಿ ಸಮೀೆಯ ವೇಳೆ ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹಿಸುವುದನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೆಲವರು ಮಾಹಿತಿ ನೀಡಲು ತಡಬಡಿಸಿದಾಗ ಮನವೊಲಿಸಿ ಮಾಹಿತಿ ಪಡೆಯಬೇಕು, ಸಮೀೆಗೆ ಪೂರಕ ದಾಖಲೆ ತೋರಿಸುವಂತೆ ಸಲಹೆ ನೀಡಬೇಕು ಎಂದು ಸಿಬ್ಬಂದಿಗೆ ನ್ಯಾ.ನಾಗಮೋಹನ್ದಾಸ್ ಸೂಚಿಸಿದರು.
ಸಮೀೆ ವೇಳೆ ಯಾವ ಪ್ರಶ್ನೆ ಕೇಳಬೇಕು, ನಮೂನೆ ಅರ್ಜಿ ಹೇಗೆ ಭರ್ತಿ ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಗೊಂದಲಗಳಿಗೆ ಒಳಗಾಗದೆ ಮಾಹಿತಿ ಪಡೆದು ಅರ್ಜಿ ಭರ್ತಿ ಮಾಡಬೇಕು. ಸ್ಥಳಿಯರ ಸಹಕಾರ ಪಡೆದುಕೊಂಡು ಮನೆಗಳಿಗೆ ಭೇಟಿ ಮಾಡಬೇಕು ಎಂದು ಸಲಹೆ ನೀಡಿದರು.
ಸಮಿತಿ ಸದಸ್ಯ ಕಾಂತರಾಜ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿ.ಪಂ ಸಿಇಒ ಪ್ರವಿಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಇತರ ಅಧಿಕಾರಿಗಳು ಸಾಥ್ ನೀಡಿದರು.
* ಧರ್ಮ ಸೇರಿಸಲು ಅವಕಾಶವಿಲ್ಲ
ಕಳೆದ 2024ರ ಆಗಸ್ಟ್ 1 ರಂದು 7 ಮಂದಿ ನ್ಯಾಯಮೂರ್ತಿಗಳ ನ್ಯಾಯ ಪೀಠವು ತೀರ್ಮಾನ ಕೈಗೊಂಡು ಸಮೀೆ ನಡೆಸಲು ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕೈಗೊಂಡು ಸಮಿತಿ ರಚನೆ ಮಾಡಿದೆ ಎಂದು ನ್ಯಾ.ನಾಗಮೋಹನ್ದಾಸ್ ತಿಳಿಸಿದರು. ದತ್ತಾಂಶ ಆಧಾರದಲ್ಲಿ ಶೈಕ್ಷಣಿಕ, ಉದ್ಯೋಗ, ಸಾಮಾಜಿಕ ಮಾನದಂಡ ಇಟ್ಟುಕೊಂಡು ಗಣತಿ ನಡೆಸಲಾಗುತ್ತಿದೆ. ಸಮೀೆಯಲ್ಲಿ ಜಾತಿ, ಉಪ ಜಾತಿ ನಮೂದಿಸಲು ಅವಕಾಶವಿದೆ ಹೊರತು ಧರ್ಮ ಸೇರಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಎಸ್ಸಿ ಅಡಿಯಲ್ಲಿ ಬರುವ 101 ಜಾತಿ ಪಟ್ಟಿ ಮಾಡಿಲಾಗಿದೆ. ಸಮೀೆಗೆ ಮುಂದಾದಾಗಿನಿಂದ ಹಲವು ದೂರುಗಳು ಬಂದವು. ಅದಕ್ಕೆ ಸೂಕ್ತ ಪರಿಹಾರ ಕಲ್ಪಿಸಲಾಗಿದೆ. ಭೋವಿ ಜಾತಿಯಲ್ಲಿ ಬೋವ, ಕಲ್ಲು ಒಡ್ಡರು, ಮಣ್ಣು ಒಡ್ಡರು ಎಂದು ಉಪ ಜಾತಿಗಳನ್ನು 2015ರ ನಂತರ ಸೇರಿಸಿಕೊಳ್ಳಲಾಗಿದೆ. ಉಪ ಜಾತಿ ನಮೂದು ಜತೆಗೆ ಇತರ ಕಲಂ ಆಯ್ಕೆ ನೀಡಲಾಗಿದೆ ಎಂದರು.
ಮಾದಿಗ, ಹೊಲೆಯ ಸೇರಿ ಹಲವು ಜಾತಿ ಹೆಸರು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಇದೀಗ ಹೇಳಿಕೊಳ್ಳಲೇ ಬೇಕು. ಸಮೀೆಯಲ್ಲಿ ಉಪ ಜಾತಿ ಬದಲಾಯಿಸಿಕೊಳ್ಳಲು ಅವಕಾಶವಿದೆ ಜಾತಿ ಕಲಂ ಸೇರಿಸಿದ್ದೇವೆ, ಧರ್ಮದ ಕಲಂ ಸೇರಿಸಿಲ್ಲ ಎಂದರು.
* ಹೊಸ ಜಾತಿ ಸೇರಿಸಲು ಮಾನದಂಡ
101 ಪಟ್ಟಿಯಲ್ಲಿ ಸೂಚಿಸಿರುವ ಜಾತಿ ಹೆಸರು ಬಿಟ್ಟು, ಬೇರೆ ಜಾತಿ ಸೇರಿಸಲು ಅವಕಾಶವಿಲ್ಲ. ಎಸ್ಸಿ ಸಮುದಾಯಕ್ಕೆ ಯಾವುದೇ ಜಾತಿ ಸೇರಿಸಬೇಕಾದರೆ ಅದಕ್ಕೆ ಮಾನದಂಡಗಳಿವೆ. ಸಮೀೆಯ ವರದಿಯನ್ನು ರಾಜ್ಯ ಸರ್ಕಾರ ಅಧ್ಯಯನ ನಡೆಸಿ ನ್ಯಾಷನಲ್ ಶೆಡ್ಯುಲ್ಡ್ ಕ್ಯಾಸ್ಟ್ಗೆ ಸೇರಿಸಬೇಕು ಎಂದು ನಿಗದಿತ ಜಾತಿ ಎಸ್ಸಿಗೆ ಸೇರಿಸಬೇಕು ಎಂದು ಪ್ರಸ್ತಾವ ಸಲ್ಲಿಸಬೇಕು. ಆಗ ಅಲ್ಲಿಂದ ಪರಿಶೀಲನೆ ಮಾಡಿ ಸಂಸತ್ನಲ್ಲಿ ಅನುಮೋದನೆ ಪಡೆದು, ರಾಷ್ಟ್ರಪತಿಗಳಿಗೆ ಕಳುಹಿಸುತ್ತಾರೆ. ಅಲ್ಲಿ ಸಹಿಯಾಗಿ ಬಂದರೆ ಅದು ಅಂತಿಮವಾಗುತ್ತದೆ ಎಂದು ನಾಗಮೋಹನ್ದಾಸ್ ತಿಳಿಸಿದರು.
* 3 ಹಂತದಲ್ಲಿ ಸಮೀಕ್ಷೆ
ಪರಿಶಿಷ್ಟ ಸಮುದಾಯಗಳ ಜಾತಿ ಸಮೀಕ್ಷೆಯಲ್ಲಿ 42 ಪ್ರಶ್ನೆ ನಮೂದು ಮಾಡಲಾಗಿದ್ದು, ಸಾಮಾಜಿಕ, ಆರ್ಥಿಕ ಸ್ಥಿತಿಗಳ ಬೆಳವಣಿಗೆಯನ್ನು ಸಮಗ್ರವಾಗಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ತಿಳಿಸಿದರು. ಮೊದಲ ಹಂತದ ಮನೆ ಮನೆ ಸಮೀಕ್ಷೆ ಮೇ 17ರತನಕ ನಡೆಯಲಿದೆ. ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರ ಆಯೋಜಿಸಲಾಗುವುದು. 3ನೇ ಹಂತ ಆನ್ಲೈನ್ನಲ್ಲಿ ನಮೂದಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
* ಯಾರೂ ದೂರ ಉಳಿಯದಿರಿ
ಜಿಲ್ಲೆಯಲ್ಲಿ ಸಮೀೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1,538 ಬೂತ್ಗಳನ್ನು ವಿಭಜನೆ ಮಾಡಿಕೊಂಡು ಸಿಬ್ಬಂದಿ ನಿಯೋಜಿಸಲಾಗಿದೆ. ಈಗಾಗಲೇ ಮಾಸ್ಟರ್ ಟೆನಿಂಗ್ ನೀಡಲಾಗಿದೆ. ಇದರ ಜತೆಗೆ ಶೇ.10 ಸಿಬ್ಬಂದಿಯನ್ನು ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.
ಜಿಲ್ಲೆಯಲ್ಲಿ 2011ರ ಸೆನ್ಸಸ್ ಪ್ರಕಾರ 14 ಲಕ್ಷ ಜನ ಸಂಖ್ಯೆಯಿತ್ತು. ಆನಂತರ 17,72,868 ಲಕ್ಷ ವಾಗಿದೆ. 1,32,534 ಎಸ್ಸಿ, 4,44,270 ಪರಿಶಿಷ್ಟ ಜಾತಿ ಜನ ಸಂಖ್ಯೆ ಇದೆ. ಈಗಿನಿ ಸಮೀೆಯಿಂದ ಯಾರೂ ದೂರ ಉಳಿಯದಂತೆ ಎಚ್ಚರವಹಿಸಲಾಗಿದೆ ಎಂದು ತಿಳಿಸಿದರು.