

ಕೋಲಾರ: ನರಸಭೆಗೆ ಕ್ರಯ ಆಗಿರುವ ಜಮೀನು ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ಇತರರಿಗೆ ಪರಭಾರೆ ಮಾಡಿರುವವರ ವಿರುದ್ಧ ನಗರದ ಗಲ್ಪೇಟೆ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ತಾಲೂಕಿನ ಖಾದ್ರಿಪುರದ ಸರ್ವೇ ನಂ&29ರ ಪೈಕಿ 1 ಎಕರೆ 19 ಗುಂಟೆ ಜಮೀನು, ಆಶ್ರಯ ಸಮಿತಿ ಯೋಜನೆಯಡಿ ನಗರಸಭೆಗೆ ಕ್ರಯ ಆಗಿದ್ದು, ನಗರವಾಸಿ ಏಜಾಜ್ಪಾಷಾ ನೈಜ ದಾಖಲೆ ಮರೆಮಾಚಿ ಬಡಾವಣೆಯಾಗಿ ನಿರ್ಮಿಸಿ ಗುಂಟೆ ಲೆಕ್ಕದಲ್ಲಿ ಮಾರಾಟ ಮಾಡಿದ್ದ. ಇದಕ್ಕೆ ಸಂಬಂಧಿಸಿ ದಾಖಲೆಗಳನ್ನು ನಗರಸಭೆ ಸದಸ್ಯ ಪ್ರವಿಣ್ಗೌಡ ಅವರು ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಬಗ್ಗೆ "ವಿಜಯವಾಣಿ'ಯಲ್ಲಿ "ಖಾಸಗಿ ಸ್ವತ್ತಾಯಿತು ನಗರಸಭೆ ಜಮೀನು' ಶೀರ್ಷಿಕೆಯಡಿ ಸರಣಿ ಸುದ್ದಿ ಪ್ರಕಟಿಸುವ ಮೂಲಕ ಇಲಾಖಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು.
ಪ್ರಕರಣ ಮುಂದಿಟ್ಟುಕೊಂಡು ದಾಖಲೆ ಕಲೆ ಹಾಕಿದಾಗ ಮತ್ತಷ್ಟು ಜಮೀನುಗಳು ನಗರಸಭೆಗೆ ಕ್ರಮ ಆಗಿರುವ ದಾಖಲೆಗಳು ಲಭ್ಯವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆಯೂ ವಿಜಯವಾಣಿಯಲ್ಲಿ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳನ್ನು, ನಗರಸಭೆಯ ಚುನಾಯಿತ ಆಡಳಿತ ಮಂಡಳಿಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು.
ದೂರುದಾರ ಪ್ರವಿಣ್ಗೌಡ ಅವರು ಪಟ್ಟು ಬಿಡದೆ ತಹಸೀಲ್ದಾರ್, ಜಿಲ್ಲಾಧಿಕಾರಿ, ಪೌರಾಯುಕ್ತರು ಹಾಗೂ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಗಮನಕ್ಕೂ ತಂದರು. ಮನವಿಗೆ ಸ್ಪಂದಿಸಿದ ಶಾಸಕರು ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸುವಂತೆ ಗಲ್ಪೇಟೆ ಇನ್ಸ್ಪೆಕ್ಟರ್ ವಿಠಲ್ ಅವರಿಗೆ ಸೂಚಿಸಿದ್ದರು.
ವಿಚಾರ ಬೆಳಕಿಗೆ ಬಂದು ವಾರ ಕಳೆದರೂ ನಗರಸಭೆಯ ಅಧಿಕಾರಿಗಳು, ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡುವುದಕ್ಕೆ ಮುಂದಾಗಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ದೂರುದಾರ ಪ್ರವಿಣ್ಗೌಡ ನಗರಸಭೆ ಎದುರು ಒಂಟಿಯಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದರ ಮಾಹಿತಿ ಗೊತ್ತಾಗುತ್ತಿದ್ದಂತೆ ಅಧ್ಯೆ ಲಕ್ಷಿ$್ಮ ದೇವಮ್ಮ ಅಧಿಕಾರಿಗಳ ಜತೆ ತಡವಾಗಿಯಾದರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಆಗ ನಗರಸಭೆಗೆ ಸೇರಿದ ಜಾಗಗಳನ್ನು ಗುರುತಿಸಿ ಸರ್ವೇ ಮಾಡಿಸಬೇಕು, ಜತೆಗೆ ಜಾಗಗಳಿಗೆ ಬೇಲಿ ನಿರ್ಮಿಸಿ ಸೂಚನಾ ಲಕ ಅಳವಡಿಸುವಂತೆ ಸೂಚಿಸಿದ್ದರು.
* ಕ್ರಿಮಿನಲ್ ಪ್ರಕರಣ ದಾಖಲಿಸಲಿ
ನಗರದ ವಸತಿ ರಹಿತರಿಗೆ ನಿವೇಶನ ವಿಂಗಡಿಸಿ ವಿತರಿಸಲು ಮುನಿವೆಂಕಟಪ್ಪ ಪರ ಜಿಪಿಎ ಹೋಲ್ಡರ್ ಆಗಿದ್ದ ಮಹ್ಮದ್ ಅಕ್ಬರ್ ಮತ್ತು ಚಾಂದ್ಪಾಷಾ 2002ರ ೆ.7ರಂದು ನಗರಸಭೆ ಪೌರಾಯುಕ್ತರಿಗೆ ಕ್ರಯ ಮಾಡಿಕೊಟ್ಟಿರುತ್ತಾರೆ. ಜಮೀನಿಗೆ ಸಂಬಂಧಿಸಿದಂತೆ ಏಜಾಜ್ ಪಾಷ ಹಾಗೂ ಇತರರು ನಿವೇಶನಗಳನ್ನು ವಿಂಗಡಿಸಿರುತ್ತಾರೆ. ಈ ಜಮೀನನ್ನು ಬೇರೆಯವರಿಗೆ ಮಾಡಿಕೊಡಬಾರದು ಎಂದು ನಗರಸಭೆಯಿಂದ 2024ರ ಸೆ. 24ರಂದು ಉಪ ನೋಂದಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜತೆಗೆ ಈ ಪತ್ರವನ್ನು ಹಿಂಪಡೆದಿಲ್ಲ. ಆದರೂ
2024ರ ನ.27ರಂದು ಪೌರಾಯುಕ್ತರ ಮೊಹರು ಮತ್ತು ಸಹಿ ಪೋರ್ಜರಿ ಮಾಡಿ ಪುರಸಭೆ ಕಾರ್ಯಾಲಯ ಕೋಲಾರ ಎಂದು ಬೋಗಸ್ ಲೆಟರ್ ಹೆಡ್ನಲ್ಲಿ ತಕರಾರು ಅರ್ಜಿ ಹಿಂಪಡೆಯುತ್ತಿರುವ ಬಗ್ಗೆ ಲಿಖಿತವಾಗಿ ಸಬ್ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಹಲವಾರು ಬಾರಿ ನೋಂದಣಿ ವಹಿವಾಟು ಮಾಡಿಸಲಾಗಿದೆ. ಅಂತೆಯೇ, ಸರ್ವೇ 29ರ ಪೈಕಿ ಜಮೀನು ನಗರಸಭೆ ಸೇರಿರುವುದರಿಂದ ನಕಲಿ ದಾಖಲೆ ಸೃಷ್ಟಿ ಮಾಡಿರುವವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪೌರಾಯುಕ್ತ ಎಸ್.ಪ್ರಸಾದ್ ದೂರು ನೀಡಿದ್ದರು.