ಎಲ್ಲ ಪುರುಷರನ್ನೂ ಅತ್ಯಾಚಾರಿಗಳು ಎಂಬಂತೆ ನೋಡುವುದು ಸರಿಯಲ್ಲ: ಸಚಿವೆ ಸ್ಮೃತಿ ಇರಾನಿ

smriti
Published on

ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಕೌಟುಂಬಿಕ ದೌರ್ಜನ್ಯದ ವಿಚಾರ ಚರ್ಚೆಗೆ ಬಂದಿದ್ದು, ಮದುವೆ ಹಾಗೂ ಪುರುಷರ ಕುರಿತು ಕೂಡ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಪುರುಷರ ಪರವಾಗಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

ದೇಶದಲ್ಲಿನ ಪ್ರತಿ ಮದುವೆಯನ್ನೂ ಕೌಟುಂಬಿಕ ದೌರ್ಜನ್ಯ ಎಂಬಂತೆ ನೋಡುವುದು, ದೇಶದ ಎಲ್ಲ ಪುರುಷರನ್ನೂ ಅತ್ಯಾಚಾರಿ ಎಂಬಂತೆ ಕಾಣುವುದು ಸರಿಯಲ್ಲ ಎನ್ನುವ ಜತೆಗೆ ಮಕ್ಕಳ ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆ ಕುರಿತು ಸರ್ಕಾರ ಏನು ಕ್ರಮಕೈಗೊಂಡಿದೆ ಎಂಬುದನ್ನು ಸಚಿವೆ ಇರಾನಿ ತಿಳಿಸಿದರು.

ದೇಶದ ಎಲ್ಲ ಮಕ್ಕಳ ಹಾಗೂ ಮಹಿಳೆಯರ ರಕ್ಷಣೆ ನಮ್ಮೆಲ್ಲರ ಆದ್ಯತೆ ನಿಜ. ಹಾಗಂತ ದೇಶದ ಪ್ರತಿ ಮದುವೆ ಹಾಗೂ ಪುರುಷನನ್ನು ಅನುಮಾನದಿಂದ ನೋಡುವುದು ಸರಿಯಲ್ಲ ಎಂದು ಸಚಿವೆ ಪ್ರತಿಪಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net