ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ

24ark3
ಅರಕಲಗೂಡು ತಾಲೂಕಿನ ಚಿಕ್ಕಬೆಮ್ಮತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿ ನಂದೀಶ್ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು. ನಾಗೇಂದ್ರ, ವರೇಶ್ ಇತರರಿದ್ದರು.
Published on

ಅರಕಲಗೂಡು: ಅರಕಲಗೂಡು: ತಾಲೂಕಿನ ಚಿಕ್ಕಬೆಮ್ಮತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏಳನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಹಾಗೂ ಶಾರದಾ ಪೂಜಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಏಳನೇ ತರಗತಿಯ ಮಕ್ಕಳ ಪಾಲಕರು ಶಾಲೆಗೆ ಸುಣ್ಣಬಣ್ಣ ಹೊಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದಾನಿ ನಂದೀಶ್ ಅವರು ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದರು. ಮುಖ್ಯಶಿಕ್ಷಕ ನಾಗೇಂದ್ರ, ಸಹ ಶಿಕ್ಷಕಿ ಕೆ.ಎಸ್.ರೂಪಾ, ಎಸ್‌ಡಿಎಂಸಿ ಅಧ್ಯಕ್ಷ ವರೇಶ್, ದಾನಿ ನಂದೀಶ್, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net