ಕುಮುದ್ವತಿ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

4-ಎಸ್ಕೆಪಿ-1-ಸಮಗ್ರ-ಪ್ರಶಸ್ತಿ-ಪಡೆದ-ಕ್ರೀಡಾಪಟುಗಳು
ಶಿಕಾರಿಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಶಿಕಾರಿಪುರದ ಕುಮುದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.
Published on

ಶಿಕಾರಿಪುರ: ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ 100 ಮೀ. ಓಟ ಪ್ರಥಮ ಮತ್ತು ದ್ವಿತೀಯ, ಟ್ರಿಪಲ್ ಜಂಪ್ ಪ್ರಥಮ, ದ್ವಿತೀಯ, ಉದ್ದ ಜಿಗಿತ ಪ್ರಥಮ ಮತ್ತು ತೃತೀಯ, ಜಾವಲಿನ್, 800 ಮೀ. ಓಟ ದ್ವಿತೀಯ, 4*100, 4*400 ರಿಲೇ ಪ್ರಥಮ, ಹರ್ಡಲ್ಸ್ ದ್ವಿತೀಯ, ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ 800 ಮೀ. 3000 ಮೀ. ಓಟ ಪ್ರಥಮ, ದ್ವಿತೀಯ, 100 ಮೀ. ಓಟ ತೃತೀಯ, ಶಾಟ್‌ಪಟ್ ದ್ವಿತೀಯ ಮತ್ತು ತೃತೀಯ, ಉದ್ದ ಜಿಗಿತ ದ್ವಿತೀಯ, ಹಾಮರ್ ಥ್ರೋ ದ್ವಿತೀಯ, ತೃತೀಯ, 4*100, 4*400 ರಿಲೇ ಪ್ರಥಮ, ಬಾಲಕರ ಕಬಡ್ಡಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಕ್ರೀಡಾಕೂಟವನ್ನು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಏಕಲವ್ಯ ಕ್ರೀಡಾಂಗಣದಲ್ಲಿ ಕಮಲಮ್ಮ ವೃಷಭೇಂದ್ರ ಸ್ವಾಮಿ ಪದವಿಪೂರ್ವ ಕಾಲೇಜಿನ ಆತಿಥ್ಯದಲ್ಲಿ ಎರಡು ದಿನ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net