ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್​ನಿಂದಲೇ ಲೈಂಗಿಕ ಕಿರುಕುಳ!

manvi-tahasildar
Published on

ರಾಯಚೂರು: ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ಮಾನ್ವಿ ತಹಸೀಲ್ದಾರ್​ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಚೇರಿಯ ಮಹಿಳಾ ಸಿಬ್ಬಂದಿಯೊಬ್ಬರು ದೂರು ನೀಡಿದ್ದಾರೆ.

ತಹಸೀಲ್ದಾರ್ ಅಮರೇಶ್ ಬಿರಾದಾರ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳಾ ಶಿರಸ್ತೇದಾರ್​, ದೂರಿನ ಪ್ರತಿ ಮತ್ತು ಅದಕ್ಕೆ ಸಂಬಂಧಿಸಿದ ಸಿಡಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿದ್ದಾರೆ. ಇದನ್ನೂ ಓದಿರಿ ಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!

ತಹಸೀಲ್ದಾರ್ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ರಾಯಚೂರು ಜಿಲ್ಲಾಧಿಕಾರಿಗಳು ಬಿಇಒ ಆರ್. ಇಂದಿರಾ ನೇತೃತ್ವದ ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ ರಚನೆಯ ತಂಡಕ್ಕೆ ಜವಾಬ್ದಾರಿ ವಹಿಸಿದ್ದಾರೆ. ಈ ಸಮಿತಿಗೆ ಶಿರಸ್ತೇದಾರ್​ ನೀಡಿರುವ ದೂರಿನ ಮತ್ತು ಸಿಡಿಯ ಪ್ರತಿಯನ್ನೂ ರವಾನಿಸಿದೆ. ಮುಂದಿನ 15 ದಿನಗಳಲ್ಲಿ ಸೂಕ್ತ ವರದಿ ನೀಡಲು ಸಮಿತಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net