

ಮಂಗಳೂರು: ವಿವಿಧ ವಸತಿ ನಿರ್ಮಾಣ ಯೋಜನೆಗಳಲ್ಲಿ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಲವಾರು ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ವಸತಿ ಯೋಜನೆ ಹಣ ಬಿಡುಗಡೆ ಸ್ಥಗಿತಗೊಳಿಸಲಾಗಿತ್ತು. 15 ದಿನಗಳಲ್ಲಿ ನೈಜ ಫಲಾನುಭವಿಗಳನ್ನು ಪತ್ತೆ ಹಚ್ಚಿ ಮನೆಗಳನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಜಿಪಂ ಸಿಇಒಗಳಿಗೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ತಾಪಂ ಇಒ, ಪಿಡಿಒ ಮತ್ತು ಶಾಸಕರ ಅನುಮೋದನೆ ಮೇರೆಗೆ ಸಿಇಒ ಫಲಾನುಭವಿಗಳನ್ನು ಆಯ್ಕೆ ಮಾಡಿ ಬಾಕಿ ಇರುವ ಮನೆಗಳ ನಿರ್ಮಾಣ ಪ್ರಕ್ರಿಯೆಗಳನ್ನು ಮುಂದುವರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾರ್ಚ್ ಬಳಿಕ ಹೊಸದಾಗಿ ಮನೆ ನಿರ್ವಿುಸಲು ಅರ್ಜಿ ಆಹ್ವಾಸನಿಸಲಾಗುವುದು. ಮುಂದಿನ 2 ವರ್ಷಗಳಲ್ಲಿ 4 ಲಕ್ಷ ಮನೆ ನಿರ್ವಿುಸುವ ಗುರಿ ಹೊಂದಲಾಗಿದೆ ಎಂದರು. ಮನೆ ನಿರ್ವಣದ ವಿವಿಧ ಹಂತಗಳನ್ನು ಅಪ್ಲೋಡ್ ಮಾಡಲು, ಹಣ ಬಿಡುಗಡೆಗೆ ಆಪ್ ಡೆವಲಪ್ ಮಾಡಲಾಗುವುದು. ನೋಡೆಲ್ ಅಧಿಕಾರಿಗಳು ಆಪ್ನಲ್ಲಿ ಅಪ್ಲೋಡ್ ಮಾಡಿದ ಬಳಿಕ, ಸಿಇಒ ಪರಿಶೀಲಿಸಿ ಮೊತ್ತ ಬಿಡುಗಡೆ ಮಾಡಲಿದ್ದಾರೆ. ಮನೆ ನಿರ್ವಣದ ವಿವಿಧ ಹಂತಗಳಿಗೆ ಅನುಗುಣವಾಗಿ 4 ಹಂತದಲ್ಲಿ ಬಿಡುಗಡೆ ಯಾಗುತ್ತಿದ್ದ ಮೊತ್ತವನ್ನು 2 ಕಂತಿಗೆ ಇಳಿಕೆ ಮಾಡಲಾಗುವುದು ಎಂದರು.