

ಕೋಲಾರ: ಹನಿಟ್ರ್ಯಾಪ್ ವಿಚಾರವೇನು ಹೊಸದೇನಲ್ಲ, ಈ ಬಗ್ಗೆ ನನ್ನ ವಿರುದ್ಧ ಪಿತ್ತೂರಿ ನಡೆಯುತ್ತಿದ್ದು, ಸರ್ಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಆರೋಪ ಬರಬಹುದೆಂದು ಭಾವಿಸಿದ್ದೇ, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸದನದಲ್ಲೂ ಸ್ಪಷ್ಟೀಕರಣ ನೀಡಿದ್ದೇನೆ ಎಂದರು.
ಹನಿಟ್ರ್ಯಾಪ್ ಕುರಿತು ದೂರು ನೀಡಲಿದ್ದು, ತನಿಖೆ ನಡೆಸುವುದು ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರಿಗೆ ಬಿಟ್ಟ ವಿಚಾರ.
ಹನಿಟ್ರ್ಯಾಪ್ ಆಗಿದೆ ಅಂತ ಎಂದು ಸದನದಲ್ಲಿ ಹೇಳಿಲ್ಲ. ಪ್ರಯತ್ನಗಳು ನಡೆದಿರಬಹುದು ಎಂದು ಹೇಳಿದ್ದೇನೆ. ಸದಾಶಿವನಗರದಲ್ಲಿ ಹನಿಟ್ರ್ಯಾಪ್ ಪ್ಯಾಕ್ಟರಿಗಳು ಇವೆ ಎಂದು ಬಿಜೆಪಿಯವರು ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ಎರಡೂ ಕಡೆಗಳಲ್ಲಿ ಹನಿಟ್ರ್ಯಾಪ್ ಫ್ಯಾಕ್ಟರಿ ಇರಬಹುದು. ಈ ಹಿಂದೆ ಹನಿಟ್ರ್ಯಾಪ್ ವಿಚಾರಗಳ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಸಾಕಷ್ಟು ಶಾಸಕ ಮಹಾಶಯರು ಕೋರ್ಟ್ಗೆ ಹೋಗಿ ಮಧ್ಯಂತರ ಆದೇಶಗಳನ್ನು ತಂದಿದ್ದಾರೆ ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳ ಆರೋಪಗಳು ಬರುತ್ತವೆ. ಹನಿಟ್ರ್ಯಾಪ್ ವಿಚಾರದಲ್ಲಿ ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಇದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತು. ತುಮಕೂರಿನಲ್ಲಿ ಇಬ್ಬರು ಶಾಸಕರಿದ್ದೇವೆ ಹೆಸರು ಹೇಳದೇ ಇರುವ ಸಮಯದಲ್ಲಿ ನಾನು ಯಾಕೆ ಮೈಮೇಲೆ ಎಳೆದುಕೊಳ್ಳಬೆಕು ಎಂದು ಸುಮ್ಮನಿದ್ದೆ ಎಂದು ತಿಳಿಸಿದರು.
ಸಿದ್ದರಾಮಯ್ಯರಿಗೆ ಬೇಕಾಗಿರುವ ಪ್ರಭಾವಿ ಸಚಿವರಿಬ್ಬರು ಹನಿಟ್ರ್ಯಾಪ್ನಲ್ಲಿ ಇದ್ದಾರೆ ಎಂದು ಗೊತ್ತಿದ್ದರೂ ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸುನೀಲ್ ಪ್ರಸ್ತಾಪ ಮಾಡಿದ್ದರು. ಮರುದಿನ ಸದನದಲ್ಲಿ ಯತ್ನಾಳ್ ಅವರು ನಾನು ಹಾಗೂ ಗೃಹ ಸಚಿವ ಪರಮೇಶ್ವರ್ ಅವರು ಇದ್ದ ವೇಳೆ ಪ್ರಸ್ತಾಪಿಸಿದ್ದರು ಎಂದರು.
ನನ್ನ ಹೆಸರು ಪ್ರಸ್ತಾಪ ಆದಮೇಲೆ ಪ್ರತಿಕ್ರಿಯೆ ನೀಡದಿದ್ದರೆ. ತಪ್ಪಾಗುತ್ತೆ ಎಂದು ತನಿಖೆ ಮಾಡಿ ಎಂದು ನಾನು ಹೇಳಿದ್ದೇನೆ. ಈ ವಿಚಾರದಲ್ಲಿ ನಾನು ನಿದೋರ್ಷಿ ಅನ್ನೋ ಕಾರಣಕ್ಕೆ ನಾನು ಈ ಮೊದಲು ದೂರು ನೀಡಿಲ್ಲ. ನನ್ನ ಹೆಸರು ಈಗ ಪ್ರಸ್ತಾಪ ಮಾಡಿದಕ್ಕೆ ಸರ್ಕಾರಕ್ಕೆ, ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ವಿವರಿಸಿದರು.
ರಾಜಕೀಯವಾಗಿ ಈ ವಿಚಾರದಲ್ಲಿ ನನಗೆ ಹಿನ್ನೆಡೆ ಆಗೋದಿಲ್ಲ. ನಾನೇನು ಕಳ್ಳತನ ಮಾಡಿಲ್ಲ, ಅನುಕಂಪವೂ ಇಲ್ಲ ಜೈಲಿಗೆ ಹೋಗಿ ಬಂದ ರೇವಣ್ಣ ಬಗ್ಗೆ ಅನುಕಂಪ ಮಾತಾಡಿದರೆ ಏಕೆ ನಿಮಗೆ ತೊಂದರೆ ಎಂದು ಬಿಜೆಪಿಯನ್ನು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಶಾಸಕರ ಅಮಾನತ್ತು ವಿಷಯಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಜನಪರ ವಿಚಾರವನ್ನಿಟ್ಟುಕೊಂಡು ಶಾಸಕರು ಚರ್ಚೆ ಮಾಡುತ್ತಿಲ್ಲ, ಬಜೆಟ್ ಬಗ್ಗೆ 80 ಶಾಸಕರು ಪ್ರಪ್ತಾಪ ಮಾಡಿದ್ದಾರೆ, ಅದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ ಎಂದರು.