ನೀನಂದ್ರೆ ನನಗಿಷ್ಟ, ಪಾಸ್​ ಆಗಬೇಕಂದ್ರೆ ಕೋಣೆಗೆ ಬಾ ಎಂದು ರೇಪ್​ ಮಾಡಿದ ಪ್ರಾಧ್ಯಾಪಕ!

sex job
Published on

ಹಾವೇರಿ: ನೀನಂದ್ರೆ ನನಗೆ ಇಷ್ಟ. ನನ್ನ ಆಸೆ ಈಡೇರಿಸು. ಇಲ್ಲವಾದರೆ ನಿನ್ನನ್ನು ಪರೀಕ್ಷೆಯಲ್ಲಿ ಫೇಲ್​ ಮಾಡುವೆ ಎಂದು ಬೆದರಿಸಿದ ಸಹಾಯಕ ಪ್ರಾಧ್ಯಪಕರೊಬ್ಬರು ಅವರ ಛೇಂಬರ್​ನಲ್ಲೇ ನನ್ನ ಮೇಲೆ ಅತ್ಯಾಚಾರ ಎಸಗಿದರು. ಮನೆಗೆ ಕರೆದೊಯ್ದು ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ. ಈ ವಿಚಾರವನ್ನ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ನನಗೆ ರಕ್ಷಣೆ ಕೊಡಿ ಎಂದು ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸ್​ ಠಾಣೆ ಮೆಟ್ಟಿಲೇರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ರಾಣೇಬೆನ್ನೂರು ತಾಲೂಕಿನ ಹನುಮನಟ್ಟಿ ಗ್ರಾಮದಲ್ಲಿರುವ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನೂರ್ ನವಾಜ್ ಎಂಬುವರ ಮೇಲೆ ಅತ್ಯಾಚಾರ ಆರೋಪದ ಕೇಸ್​ ದಾಖಲಾಗಿದೆ. ಡಾ.ನೂರ್ ನವಾಜ್ ವಿರುದ್ಧ ನೊಂದ ವಿದ್ಯಾರ್ಥಿನಿ ತನ್ನ ತಂದೆಯ ಜತೆಯಲ್ಲಿ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಸಂತ್ರಸ್ತ ಯುವತಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. 'ನನ್ನ ಆಸೆ ಈಡೇರಿಸಿದರೆ ನನ್ನ ವಿಷಯದಲ್ಲಿ ನಿನ್ನನ್ನು ಉತ್ತೀರ್ಣ ಮಾಡುವೆ' ಎಂದು ಡಾ.ನೂರ್​ ನವಾಜ್​ ತನ್ನ ಛೇಂಬರ್​ನಲ್ಲೇ ನನ್ನ ಮೇಲೆರಗಿ ಅತ್ಯಾಚಾರ ಮಾಡಿದ್ದಾನೆ. ಮನಗೆ ಕರೆದೊಯ್ದೂ ಲೈಂಗಿಕ ದೌರ್ಜನ್ಯವೆಸಗಿದ್ದಾನೆ' ಎಂದು ಸಂತ್ರಸ್ತ ಯುವತಿ ದೂರಿದ್ದಾರೆ. ಆರೋಪಿ ಸಹಾಯಕ ಪ್ರಾಧ್ಯಾಪಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net