ಆಟೋ ಚಾಲಕರು ಕರೆದ ಕಡೆಗೆ ಬರಲು ನಿರಾಕರಿಸಿದರೆ, ದುಪ್ಪಟ್ಟು ಬಾಡಿಗೆ ಕೇಳಿದರೆ ದೂರು ನೀಡಿ; 10 ದಿನದಲ್ಲಿ 670 ಕೇಸ್

auto
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಟೋ ಚಾಲಕರ ವಿರುದ್ಧ ಪ್ರಯಾಣಿಕರಿಂದ ಬರುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಇಳಿದಿದ್ದಾರೆ.

ಸೆಪ್ಟೆಂಬರ್ 14 ರಿಂದ 23ರವರೆಗೆ ನಗರ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ 670 ಪ್ರಕರಣ ದಾಖಲಿಸಿಕೊಂಡು, 3.36 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಪ್ರಯಾಣಿಕರಿಂದ ಹೆಚ್ಚಿನ ಬಾಡಿಗೆ ವಸೂಲಿ, ಕರೆದ ಕಡೆಗೆ ಬಾರದೆ ಇರುವ ಆಟೋ ಚಾಲಕರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈಶಾನ್ಯ ಉಪ ವಿಭಾಗದಲ್ಲಿ ಹೆಚ್ಚು ಬಾಡಿಗೆ ಪಡೆದ ಆರೋಪದಡಿ 141 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ 72 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

ಉತ್ತರ ಉಪ ವಿಭಾಗದಲ್ಲಿ 213 ಆಟೋ ಚಾಲಕರ ವಿರುದ್ಧ ಕೇಸ್ ದಾಖಲಿಸಿ, 1.06 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಈಶಾನ್ಯ ಉಪ ವಿಭಾಗದಲ್ಲಿ ಪ್ರಯಾಣಿಕರು ಕರೆದ ಕಡೆ ಬಾರದ 95 ಆಟೋ ಚಾಲಕರ ವಿರುದ್ಧ ಕೇಸ್ ದಾಖಲಿಸಿ 47,500 ರೂ. ದಂಡ ವಿಧಿಸಲಾಗಿದೆ.

ಅದೇ ರೀತಿ ಉತ್ತರ ಉಪ ವಿಭಾಗದಲ್ಲಿ ಪ್ರಯಾಣಿಕರು ಕರೆದ ಕಡೆ ಬಾರದ 221 ಆಟೋ ಚಾಲಕರ ಮೇಲೆ ಪ್ರಕರಣ ದಾಖಲಿಸಿ, 1.10 ಲಕ್ಷ ರೂ. ದಂಡ ವಿಧಿಸಲಾಗಿದೆ. 10 ದಿನಗಳ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಇದು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net