ನಿರಂತರ ಕಲಿಕೆಯಿಂದ ಮಾತ್ರ ಸ್ಪರ್ಧೆ ಸಾಧ್ಯ

7spt1
ಸೋಮವಾರಪೇಟೆ ವಿದ್ಯಾ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್‌ಕೇರ್ ಟ್ರೈನಿಂಗ್ ಸೆಂಟರ್‌ನ ಪಾಲಕರ ಸಭೆಯಲ್ಲಿ ಹಿರಿಯ ಸಾಹಿತಿ ನ.ಲ.ವಿಜಯ ಅವರನ್ನು ಸನ್ಮಾನಿಸಲಾಯಿತು. ಉದಯ, ಸುಲೈಮಾನ್, ಅಲಿಮಾ ಇದ್ದರು.
Published on

ಸೋಮವಾರಪೇಟೆ: ವಿದ್ಯಾ ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್‌ಕೇರ್ ಟ್ರೈನಿಂಗ್ ಸೆಂಟರ್‌ನ ಪಾಲಕರ ಸಭೆ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೊಡ್ಡಮಳ್ತೆ ಹೊನ್ನಮ್ಮ ತಾಯಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ಎ.ಉದಯ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತಾಪಿ ಜನರು ಹೆಚ್ಚಾಗಿದ್ದಾರೆ. ನಗರ ಪ್ರದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಷ್ಟಸಾಧ್ಯ. ತಾಲೂಕಿನ ಮಟ್ಟಿಗೆ ವಿದ್ಯಾ ನರ್ಸಿಂಗ್ ಕಾಲೇಜು ಒಂದೇ ಇರುವುದು. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ಹೆಚ್ಚಿನ ಅಂಕಗಳಿಸಿ, ಉದ್ಯೋಗ ಪಡೆದುಕೊಳ್ಳಬೇಕು. ಈಗ ಸ್ಪರ್ಧಾತ್ಮಕ ಯುಗ. ನಿರಂತರ ಕಲಿಕೆಯಿಂದ ಮಾತ್ರ ಸ್ಪರ್ಧೆ ಮಾಡಬಹುದು. ಸಿಕ್ಕಿದ ಸಮಯವನ್ನು ವ್ಯರ್ಥ ಮಾಡದೆ ಕಲಿಯುವುದಕ್ಕೆ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತಿ ನ.ಲ.ವಿಜಯ, ಪ್ರಾಧ್ಯಾಪಕಿ ಮಂಜುಳಾ ಸಂತೋಷ್ ಅವರನ್ನು ಸನ್ಮಾನಿಸಲಾಯಿತು. ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ಸುಬ್ರಮಣಿ, ಇನ್ಸ್‌ಟಿಟ್ಯೂಟ್‌ನ ವ್ಯವಸ್ಥಾಪಕ ಕೆ.ಈ.ಸುಲೈಮಾನ್, ಪ್ರಾಂಶುಪಾಲ ಅಲೀಮ ಸುಲೈಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net