ಹಾಸನದಲ್ಲಿ 'ಕೈ'​ ಜನಕಲ್ಯಾಣ ಸಮಾವೇಶ: ಚಾಮರಾಜನಗರದಲ್ಲಿ ಸಾರಿಗೆ ಬಸ್​ಗಳಿಲ್ಲದೆ ಪ್ರಯಾಣಿಕರ ಪರದಾಟ | Stranded

ವಿಜಯವಾಣಿ - 2024-12-05T134334.521
Published on

ಚಾಮರಾಜನಗರ: ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ಒಪ್ಪಂದದ ಮೇರೆಗೆ ರಾಜ್ಯ ಸಾರಿಗೆ ಬಸ್​ಗಳನ್ನು ನೀಡಿರುವುದರಿಂದ ಚಾಮರಾಜನಗರದಲ್ಲಿ ಬಸ್​ಗಳ ಕೊರತೆ ಉಂಟಾಗಿ ಪ್ರಯಾಣಿಕರು ಪರದಾಡುವಂತ (Stranded) ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಕೆಎಸ್​ಆರ್​ಟಿಸಿ ಉಪ ವಿಭಾಗದಿಂದ ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜನಕಲ್ಯಾಣ ಸಮಾವೇಶಕ್ಕೆ 200ಕ್ಕಿಂತಲೂ ಅಧಿಕ ಬಸ್​ಗಳು ತೆರಳಿವೆ. ಪರಿಣಾಮವಾಗಿ ನಗರದ ಬಸ್ ನಿಲ್ದಾಣದಲ್ಲಿ ಮೈಸೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಇನ್ನಿತರೆ ಕಡೆಗಳಿಗೆ ತೆರಳುವ ಪ್ರಯಾಣಿಕರು ಸೂಕ್ತ ಸಮಯಕ್ಕೆ ಬಸ್ ಇಲ್ಲದೆ ಪರದಾಡುವಂತಾಗಿದೆ.

ಬಸ್​ಗಳಿಲ್ಲದೆ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣವು ಬಿಕೋ ಎನ್ನುತ್ತಿದ್ದು, ಬೆಳಗ್ಗಿನ ಸಮಯದಲ್ಲಿ ಸರ್ಕಾರಿ ಕೆಲಸ, ಶಾಲಾ-ಕಾಲೇಜು ಮತ್ತು ಇನ್ನಿತರೆ ಕಡೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ಬೆರಳೆಣಿಕೆಯ ಬಸ್​ಗಳು ಬಂದಿದ್ದೇ ತಡ ಸೀಟ್​ ಹಿಡಿಯಲು ಪ್ರಯಾಣಿಕರಲ್ಲಿ ನೂಕುನುಗ್ಗಲು ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net