ಡಾ.ಅಂಬೇಡ್ಕರ್ ಅವರ ದೇಶದ ಕುರಿತ ಕನಸು ನನಸು ಮಾಡುವುದಕ್ಕೆ ಬದ್ಧರಾಗಿದ್ದೇವೆ- ಪ್ರಧಾನಿ ನರೇಂದ್ರ ಮೋದಿ

Prime Minister Narendra Modi on Sunday paid tributes to B R Ambedkar on his death anniversary
Published on

ನವದೆಹಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯತಿಥಿ ನಿಮಿತ್ತ ಅವರಿಗೆ ಗೌರವ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಕುರಿತ ಅವರ ಕನಸು ನನಸು ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸಂವಿಧಾನ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ದಲಿತ ನಾಯಕನೆಂಬ ನೆಲೆಯಲ್ಲಿ ಅವರನ್ನು ಜನ ಗುರುತಿಸಿದ್ದರು. ಅವರು 1956ರಲ್ಲಿ ಇದೇ ದಿನ ಅಸ್ತಂಗತರಾದರು. ಇಂತಹ ಮಹಾನ್ ನಾಯಕನಿಗೆ ಗೌರವ ಸಲ್ಲಿಸುತ್ತ ಪ್ರಧಾನಿ ಮೋದಿಯವರು ಟ್ವೀಟ್​ ಮೂಲಕ ಗೌರವ ಸಲ್ಲಿಸುತ್ತ ಹೇಳಿರುವುದಿಷ್ಟು -

"ಮಹಾಪರಿನಿರ್ವಾಣದಿನವಾಗಿರುವ ಇಂದು ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಚಿಂತನೆಗಳು ಜೀವನಾದರ್ಶಗಳು ಲಕ್ಷಾಂತರ ಜನರ ಬದುಕಿಗೆ ಬಲ ತುಂಬಿದೆ. ನಮ್ಮ ದೇಶದ ಕುರಿತಾದ ಅವರ ಕನಸುಗಳನ್ನು ನನಸು ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ."

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net