ಹಾಲಿ ಮತ್ತು ಮಾಜಿ ಎಂಎಲ್​ಎ ಬೆಂಬಲಿಗರ ನಡುವೆ ಗಲಾಟೆ

shrirangapattana
Published on

ಮಂಡ್ಯ: ಎಲ್ಲೆಡೆ ಕೋವಿಡ್ ಸೋಂಕು ಮಣಿಸಲು ಹೋರಾಟ ನಡೆಯುತ್ತಿದೆ. ಆದರೆ, ಶ್ರೀರಂಗಪಟ್ಟಣದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಸ್ವಪ್ರತಿಷ್ಠೆಯ ಸೆಣಸಾಟ ಶುರುವಾಗಿದೆ.

ಕರೊನಾ ಆತಂಕದ ನಡುವೆಯೂ ಪಟ್ಟಣದ ಪಿಎಲ್​ಡಿ ಬ್ಯಾಂಕ್ ಆವರಣದಲ್ಲಿ ಇಂದು (ಸೋಮವಾರ) ಬೆಳಗ್ಗೆ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರು ಪರಸ್ಪರ ಅಂತರ ಮರೆತು, ಮಾಸ್ಕ್ ಧರಿಸದೆ ಗುಂಪು ಸೇರಿ ಗಲಾಟೆ ಮಾಡಿಕೊಂಡರು. ಇದನ್ನೂ ಓದಿರಿ ಕುಣಿಗಲ್​ ಶಾಸಕ ಡಾ.ರಂಗನಾಥ್​ಗೆ ಕರೊನಾ, ರಾಜ್ಯ-ರಾಷ್ಟ್ರಮಟ್ಟದ ಕಾಂಗ್ರೆಸ್​ ನಾಯಕರಲ್ಲೂ ಸೋಂಕಿನ ಭೀತಿ

ಪಿಎಲ್​ಡಿ ಬ್ಯಾಂಕ್ ಆವರಣದಲ್ಲಿ ವಾಣಿಜ್ಯ ಮಳಿಗೆ ಉದ್ಘಾಟನೆ ಮಾಡಲು ಬಂದ ಮಾಜಿ ಶಾಸಕ ರಮೇಶ್ ಬಂಡ್ಡೀಸಿದ್ದೇಗೌಡರನ್ನು ತಡೆದ ಹಾಲಿ ಶಾಸಕರ ಬೆಂಬಲಿಗರು, ಶಾಸಕರಿಂದ ಉದ್ಘಾಟನೆ ಮಾಡಿಸದೆ ಮಾಜಿ ಶಾಸಕರಿಗೆ ಆಹ್ವಾನಿಸಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ಘಾಟನೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದಾಗ ಮಾಜಿ ಶಾಸಕರ ಬೆಂಬಲಿಗರು ಮಧ್ಯಪ್ರವೇಶಿಸಿದ್ದು, ಮಾತಿನ ಚಕಮಕಿ, ಜಟಾಪಟಿ ನಡೆದಿದೆ. ಈ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net