ದುಃಖಿತರಿಗೆ ಸಾಂತ್ವನ

untitled-design-1-689e25b79db81
Published on
ಹ.ಕುರ್ರ: ಬಿನ್ ಇಮಾಸ್ ಹೇಳುತ್ತಾರೆ: ಪ್ರವಾದಿ(ಸ) ಮಹಮ್ಮದ್ ಮಸ್ಜಿದುನ್ನಬವಿಯಲ್ಲಿ ಕುಳಿತಿದ್ದರು. ಆಗ ಸಹಾಬಿಗಳ ಪೈಕಿ ಕೆಲವರು ಅವರ ಹತ್ತಿರ ಕುಳಿತರು. ಅವರಲ್ಲಿ ಒಬ್ಬ ವ್ಯಕ್ತಿಗೆ ಒಂದು ಮಗುವಿತ್ತು. ಅದು ಪ್ರವಾದಿಯವರ ಬೆನ್ನ ಹಿಂದಿನಿಂದ ಬರುತ್ತಿತ್ತು. ಅವರು ಅದನ್ನು ತಮ್ಮ ಮುಂದೆ ಕುಳ್ಳಿರಿಸಿಕೊಳ್ಳುತ್ತಿದ್ದರು. ಹೀಗೆಯೇ ಕಾಲ ಕಳೆಯುತ್ತಿದ್ದರು.

ಯಾವತ್ತೋ ಒಂದು ದಿನ ಆ ಮಗು ಮರಣ ಹೊಂದಿತು. ಆ ಮಗುವಿನ ತಂದೆ ಅದೇ ದುಃಖದಲ್ಲಿ ಕೆಲ ದಿನ ಸಭೆಗೆ ಬರಲಿಲ್ಲ. ಪ್ರವಾದಿ ಏಕೆಂದು ಕೇಳಿದಾಗ ಜನ, ಆ ವ್ಯಕ್ತಿಯ ಮಗು ತೀರಿಕೊಂಡಿದೆ ಎಂಬುದನ್ನು ತಿಳಿಸಿದರು. ನಂತರ ಪ್ರವಾದಿ(ಸ) ಆ ವ್ಯಕ್ತಿಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಂತರ ಪ್ರವಾದಿ, ‘ಆ ಮಗು ನಿಮ್ಮ ಜೀವಮಾನವಿಡೀ ಬದುಕುವುದು, ಇಲ್ಲವೆ, ಅದು ಮೊದಲು ಹೋಗಿ ನೀವು ಸ್ವರ್ಗದ ಬಾಗಿಲಿಗೆ ತಲುಪುವಾಗ ನಿಮ್ಮನ್ನು ಸ್ವಾಗತಿಸುತ್ತಾ, ನಿಮಗಾಗಿ ಸ್ವರ್ಗದ ಬಾಗಿಲನ್ನು ತೆರೆಯುವುದು. ಈ ಪೈಕಿ ನಿಮಗೆ ಯಾವುದು ಇಷ್ಟ?’. ಎಂದು ಕೇಳಿದರು. ಅದು ಮೊದಲು ಹೋಗಿ ನನಗಾಗಿ ಸ್ವರ್ಗದ ಬಾಗಿಲನ್ನು ತೆರೆಯುವುದೇ ನನಗೆ ಇಷ್ಟ ಎಂದಾಗ ಪ್ರವಾದಿ(ಸ) ಹೇಳಿದರು: ನಿಮಗೆ ಹಾಗೇ ಆಗುವುದು.ಹ.ಇಬ್ನು ಉಮರ್ ಹೇಳುತ್ತಾರೆ, ನಾವು ಪ್ರವಾದಿ ಅವರ ಹತ್ತಿರ ಕುಳಿತಿದ್ದೇವು. ಅಲ್ಲಿಗೆ ಒಬ್ಬ ಅನ್ಸಾರಿ ಆಗಮಿಸಿದರು.

ಅವರು ಪ್ರವಾದಿಯವರಿಗೆ ನಮಸ್ಕಾರ ಮಾಡಿ ಮರಳಲು ದ್ಯುಕ್ತರಾದರು. ಆಗ ಪ್ರವಾದಿಯವರು ಅವರೊಡನೆ ಸ ಅದ್ ಬಿನ್ ಕುಬಾದ್ ಹೇಗಿದ್ದಾರೆಂದು ವಿಚಾರಿಸಿದರು. ಅವರು ಚೆನ್ನಾಗಿದ್ದಾರೆಂದು ಆ ವ್ಯಕ್ತಿ ಹೇಳಿದರು. ಆಗ ಪ್ರವಾದಿಗಳು ಸಭಿಕರನ್ನು ಉದ್ದೇಶಿಸಿ, ನಿಮ್ಮಲ್ಲಿ ಯಾರು ಅವರ ರೋಗ ಸಂದರ್ಶನಕ್ಕೆ ಬರುತ್ತೀರಿ ಎಂದು ಕೇಳಿದಾಗ ನಾವೂ ಎದ್ದೆವು. ಪ್ರವಾದಿ(ಸ) ಹಾಗೂ ಅವರೊಂದಿಗಿದ್ದವರು ಆ ರೋಗಿಯ (ಸ ಅದ್) ಹತ್ತಿರ ಹೋಗಿ ಕುಶಲ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net