

ಬೆಂಗಳೂರು: ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK) COMEDK UGET 2020 ಪರೀಕ್ಷೆಗೆ ಹೊಸ ದಿನಾಂಕ ಬಿಡುಗಡೆ ಮಾಡಿದೆ.
ಹೊಸ ವೇಳಾಪಟ್ಟಿಯ ಪ್ರಕಾರ, ಪದವಿ ಪ್ರವೇಶ ಪರೀಕ್ಷೆ ಆಗಸ್ಟ್ 19 ರಂದು ನಡೆಯಲಿದೆ. ಈ ಮೊದಲು ಒಕ್ಕೂಟವು ಜುಲೈ 25 ರಿಂದ ಆಗಸ್ಟ್ 1 ರವರೆಗೆ ಪರೀಕ್ಷೆಗಳನ್ನು ಮರು ನಿಗದಿಪಡಿಸಿತ್ತು.
ಪ್ರವೇಶ ಪರೀಕ್ಷೆ ಎರಡು ಅವಧಿಯಲ್ಲಿ ನಡೆಯಲಿದೆ. ಮೊದಲ ಅವಧಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೇ ಅವಧಿ 2 ರಿಂದ 5 ರವರೆಗೆ ಇರಲಿದೆ. ಪರೀಕ್ಷೆಯ ಒಟ್ಟು ಅವಧಿ ಮೂರು ಗಂಟೆಗಳು.
"ಕೋವಿಡ್ನಿಂದಾಗಿ ಆರೋಗ್ಯದ ದೃಷ್ಟಿಯಿಂದ, ಒಕ್ಕೂಟದ ಸಹಾಯವಾಣಿ ಈಗ ಬಂದ್ ಆಗಿದ್ದು, ಎಲ್ಲ ವಿಚಾರಣೆಗಳಿಗೆ/ ಪ್ರಶ್ನೆಗಳಿಗೆ ಇಮೇಲ್ ಮೂಲಕ ಮಾತ್ರ ಉತ್ತರಿಸಲಾಗುವುದು. ವಿಚಾರಣೆ / ಪ್ರಶ್ನೆಗಳಿದ್ದಲ್ಲಿ studenthelpdesk@comedk.org ಗೆ ತಿಳಿಸಬಹುದು ಎಂದು COMDEK ತಿಳಿಸಿದೆ.