ಕಾಲೇಜು ಶಿಕ್ಷಕನನ್ನು ಕೊಠಡಿಯೊಳಗೆ ಕೂಡಿ ಬೆಂಕಿಯಿಟ್ಟ ದುಷ್ಕರ್ಮಿಗಳು! ಸುಟ್ಟ ಗಾಯಗಳಿಂದ ವ್ಯಕ್ತಿ ಬಲಿ

ವಿಜಯವಾಣಿ - 2024-01-29T110025.706
Published on

ಕಾನ್ಪುರ: 48 ವರ್ಷದ ಸರ್ಕಾರಿ ಕಾಲೇಜು ಶಿಕ್ಷಕನನ್ನು ಕೊಠಡಿಯೊಂದರಲ್ಲಿ ಕೂಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು, ಎಲ್ಲಿಯೂ ತಪ್ಪಿಸಿಕೊಳ್ಳದಂತೆ ಬಂಧಿಸಿ ತದನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ತುತ್ತಾದ ವ್ಯಕ್ತಿ ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ವರದಿಯಾಗಿದೆ.

ಮೃತಪಟ್ಟ ಶಿಕ್ಷಕನನ್ನು ದಯಾರಾಮ್ ಎಂದು ಗುರುತಿಸಲಾಗಿದ್ದು, ಘಟನೆ ಸಂಭವಿಸುವ ಮುನ್ನ ತಮ್ಮ ಕಿರಿಯ ಸಹೋದರ ಅನುಜ್‌ಗೆ ದೂರವಾಣಿ ಕರೆ ಮಾಡಿ, ಸಂಜೀವ್ ಮತ್ತು ಅವನ ಸಹಾಯಕರು ಪತ್ರಸಾ ಗ್ರಾಮದ ಕೊಠಡಿಯಲ್ಲಿ ನನ್ನನ್ನು ಬೀಗ ಹಾಕಿ ಕೂಡಿ, ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ. ಆದ್ರೆ, ಅಷ್ಟರೊಳಗೆ ದಯಾರಾಮ್​ ಪ್ರಾಣ ಪಕ್ಷಿ ಹಾರಿಹೋಗಿದೆ.

ಕರೆ ಬಂದ ಕೂಡಲೇ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದ ಸಹೋದರ ಅನುಜ್ ಕೊಠಡಿಯ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆದ್ರೆ, ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದ ದಯಾರಾಮ್ ಅವರ ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ. ಶೀಘ್ರವೇ ಸಂಜೀವ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಪೊಲೀಸರು, ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net